ಆರೋಗ್ಯಪೂರ್ಣವಾಗಿ ಕಂಗೊಳಿಸುವ ದೇಹವೆಂಬ ಗುಡಿಯಲ್ಲಿ ಮಾತ್ರವೇ ದೇವರು ವಿರಾಜಮಾನನಾಗುತ್ತಾನೆ ಎಂಬ ಬಗ್ಗೆ ಸಂದೇಹವೇ ಬೇಡ. ಏಕೆಂದರೆ ಆರೋಗ್ಯಪೂರ್ಣ ದೇಹ ಯಾವತ್ತೂ ದೇವರ ಸೇವೆಗೆ ಸದಾ ಸಿದ್ಧವಾಗಿರುವುದಲ್ಲದೆ ಆ ಮಹತ್ಕಾರ್ಯಕ್ಕೆಂದೇ ಮೀಸಲಾಗಿರುತ್ತದೆ. ಪರೋಪಕಾರವೇ ದೇವರ ಸೇವೆ ಎಂಬ ದೃಷ್ಟಿಯಿಂದ ನೋಡಿದಾಗಲೂ ಅತ್ಯುತ್ತಮ ಆರೋಗ್ಯವಿರುವ ದೇಹದ ಮೂಲಕ ಮಾತ್ರವೇ ಅಂತಹ ನಿಸ್ವಾರ್ಥ ಸೇವಾಕಾರ್ಯ ಸಾಧ್ಯವಾಗುತ್ತದೆ. ಆರೋಗ್ಯಪೂರ್ಣ ದೇಹದಲ್ಲಿ ನಿಸ್ವಾರ್ಥಭಾವ ಮನೆಮಾಡಿಕೊಂಡಿರುತ್ತದೆ. ರೋಗ ರುಜಿನಗಳಿಂದ, ವೈಕಲ್ಯದಿಂದ ಬಳಲುವ ದೇಹದೊಳಗಿನ ಮನಸ್ಸು ಕೂಡ ಅನಾರೋಗ್ಯಕ್ಕೆ ಗುರಿಯಾಗಿರುವುದನ್ನು ನಾವು ಕಾಣಬಹುದು. ಇದಕ್ಕೆ ಕಾರಣ ಇμÉ್ಟೀ: ಸ್ವತಃ ದುಃಖ ಅನುಭವಿಸು ವಾತನಿಗೆ ಇಡಿಯ ಪ್ರಪಂಚವೇ ದುಃಖಮಯವಾಗಿ ಕಾಣುತ್ತದೆ. ಮಾತ್ರವಲ್ಲ ಸುಖದಲ್ಲಿರುವವರನ್ನು ಕಂಡಾಗ ಅಸೂಯೆಯು ಸ್ಫೋಟಗೊಂಡು ಅವರ ಪಾಲಿನ ಸುಖವನ್ನು ಹೇಗಾದರೂ ತಾನು ಕಸಿದುಕೊಂಡು ಅವರನ್ನು ದುಃಖಕ್ಕೆ ಈಡುಮಾಡಬೇಕೆಂಬ ಈμರ್Éಯೂ ಮೂಡುತ್ತದೆ. ಆದುದ ರಿಂದಲೇ ನಿಸ್ವಾರ್ಥದ ಸುಖಜೀವನ ನಡೆಸಲು ದೇಹದ ಆರೋಗ್ಯಕ್ಕೆ ನಾವು ಸದಾ ಪ್ರಾಮುಖ್ಯ ನೀಡಬೇಕು. ದೇಹದ ಆರೋಗ್ಯ ಚೆನ್ನಾಗಿದ್ದರೆ ದಿನವಿಡೀ ಉತ್ತಮ ಲವಲವಿಕೆ, ವಯಸ್ಸನ್ನು ಲೆಕ್ಕಿಸದ ಯೌವನದ ಹುಮ್ಮಸ್ಸು ನಿಸ್ವಾರ್ಥಭಾವ, ಎಲ್ಲರೂ ಚೆನ್ನಾಗಿ ಆರೋಗ್ಯಪೂರ್ಣವಾಗಿ, ಸುಖಮಯವಾಗಿ ಬದುಕಬೇಕೆಂಬ ವಿಶಾಲ ಮನೋಭಾವ ಸದಾ ಜಾಗೃತವಾಗಿರುತ್ತದೆ. ಇಂತಹ ಪವಿತ್ರ ಮನೋಭಾವ ಇರುವಲ್ಲಿ ಮಾತ್ರವೇ ದೇವರು ವಾಸವಾಗಿರುತ್ತಾನೆ. ಏಕೆಂದರೆ ಅವನಿಗೆ ‘ನೆನೆದವರ ಮನದಲ್ಲಿ ನೆಲೆಸುವಷ್ಟು ಪ್ರಿಯವಾದ ಸಂಗತಿ ಬೇರೊಂದಿಲ್ಲ!