ಪ್ರತಿಯೊಂದು ದೇವಸ್ಥಾನಕ್ಕೂ ಒಂದು ಸ್ಥಳ ಪುರಾಣ ಇದ್ದೇ ಇರುತ್ತದೆ. ಉಡುಪಿಯ ಕೃಷ್ಣ ಮಠವನ್ನು ಮಧ್ವಾಚಾರ್ಯರು ಪ್ರತಿಷ್ಠಾಪಿಸಿದರೆಂಬ ಪ್ರತೀತಿ ಇದೆ . ಪರಶುರಾಮರು ಭೂಮಂಡಲವನ್ನು 21 ಬಾರಿ ಸುತ್ತಿ ಅಖಂಡ ಭೂಮಂಡಲವನ್ನು ತನ್ನದಾಗಿಸಿದ ನಂತರ ತಾನು ಗೆದ್ದಂತಹ ಎಲ್ಲಾ ಪ್ರದೇಶಗಳನ್ನು ಬ್ರಾಹ್ಮಣರಿಗೆ ದಾನ ಮಾಡಿಕೊಡುತ್ತಾನೆ . ತಾನು ದಾನ ಮಾಡಿದ ಕ್ಷೇತ್ರದಲ್ಲಿ ಇರಲು ಬಯಸದೆ ಸ್ವಲ್ಪ ಭಾಗವನ್ನು ವರುಣನಲ್ಲಿ ಮತ್ತು ಪಶ್ಚಿಮದಲ್ಲಿ ಒಂದು ಪಟ್ಟಿ ನೆಲದ ಭಾಗವನ್ನು ಸಮುದ್ರದ ಸಹಾಯದಿಂದ ಪಡೆದುಕೊಳ್ಳುತ್ತಾನೆ ಈ ಕ್ಷೇತ್ರ ವನ್ನು ಭಾರ್ಗವ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. ಭಾರ್ಗವ ಕ್ಷೇತ್ರದಲ್ಲಿದ್ದದ್ದು ಉಡುಪಿಯ ರಜತಪೀಠ . ಉಡುಪಿಗೆ ಉಡುಪಿ ಎಂಬ ಹೆಸರು ಬಂದಿದ್ದಾದರೂ ಹೇಗೆ ಎಂಬುದಕ್ಕೆ ಒಂದು ವಿಶಿಷ್ಟ ಸ್ಥಳ ಪುರಾಣವಿದೆ ಒಂದು ಬಾರಿ ದಕ್ಷ ಪ್ರಜಾಪತಿಯ ಶಾಪದಿಂದ ಚಂದ್ರನ ಹೊಳಪು ಕಡಿಮೆಯಾಗುತ್ತಾ ಹೋಯಿತು ದಿನದಿಂದ ದಿನಕ್ಕಚಂದ್ರನ ಹೊಳಪು ಕಳೆಗುಂದುತ್ತಾ ಇರುತ್ತದೆ ಆ ಸಮಯದಲ್ಲಿ ಚಂದ್ರನು ಶಿವನನ್ನು ಕುರಿತು ತಪಸ್ಸು ಮಾಡಿ ಶಾಪ ವಿಮೋಚನೆ ಮಾಡಿಕೊಳ್ಳುತ್ತಾನೆ ಮತ್ತೆ ತನ್ನ ಹಿಂದಿನ ಹೊಳಪನ್ನು ಪಡೆಯುತ್ತಾನೆ. ಚಂದ್ರನು ಭಕ್ತಿಯಿಂದ ಶಿವನಿಗೆ ದೇವಾಲಯವನ್ನು ಕಟ್ಟಿಸುತ್ತಾನೆ . ಈಗ ದೇವಾಲಯ ಇಂದಿಗೂ ಉಡುಪಿಯಲ್ಲಿ ಚಂದ್ರಮೌಳೇಶ್ವರ ದೇವಾಲಯ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ ಚಂದ್ರನ ಇನ್ನೊಂದು ಹೆಸರೇ ಉಡುಪ, ಚಂದ್ರನು ಶಿವನ ಕುರಿತು ತಪಸ್ಸು ಮಾಡಿದ ಈ ಕ್ಷೇತ್ರದ ಹೆಸರೇ ಉಡುಪಿ ಎಂದು ಪ್ರಸಿದ್ಧವಾಯಿತು ಎಂದು ಸ್ಥಳ ಪುರಾಣ ಹೇಳುತ್ತದೆ.
ಶ್ರೀ ಮಧ್ವಾಚಾರ್ಯರು ಕ್ರಿಸ್ತ ಪೂರ್ವ 1238ನೇ ಇಸವಿಯಲ್ಲಿ ಪಾಜಕ ಎಂಬ ಕ್ಷೇತ್ರದಲ್ಲಿ ಜನಿಸುತ್ತಾರೆ ಒಂದು ಸಲ ಮಧ್ವಾಚಾರ್ಯರು ಸಮುದ್ರ ಸ್ನಾನಕ್ಕೆಂದು ಮಲ್ಪೆಗೆ ಬರುತ್ತಾರೆ. ಆಗ ದ್ವಾರಕೆಯಿಂದ ಬಂದಂತಹ ಹಡಗು ಕಡಲಿನ ಅಲೆಗಳಿಗೆ ಸಿಕ್ಕಿ ಮುಳುಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮಧ್ವಾಚಾರ್ಯರು ತನ್ನ ತಪಶಕ್ತಿಯಿಂದ ಹಡಗನ್ನು ರಕ್ಷಿಸುತ್ತಾರೆ. ರಕ್ಷಿಸಿದ ಹಡಗಿನ ಮಾಲೀಕ ಮಧ್ವಾಚಾರ್ಯರಿಗೆ ಉಡುಗೊರೆಗಳನ್ನು ಅರ್ಪಿಸಲು ಬಂದಾಗ ಆಚಾರ್ಯರು ಹಡಗಿನಲ್ಲಿದ್ದ ಎರಡು ಗೋಪಿ ಚಂದನಗಳನ್ನು ಮಾತ್ರ ತೆಗೆದುಕೊಳ್ಳುತ್ತಾರೆ ಒಂದು ಗೋಪಿ ಚಂದನವನ್ನು ಒಡೆದಾಗ ಅದರಲ್ಲಿ ಒಂದು ಸುಂದರವಾದ ಬಲರಾಮನ ಮೂರ್ತಿ ಸಿಗುತ್ತದೆ. ಆ ಬಲರಾಮನ ಮೂರ್ತಿಯನ್ನು ಅಲ್ಲೇ ಪ್ರತಿಷ್ಠಾಪಿಸುತ್ತಾರೆ. ಆ ದೇವಸ್ಥಾನದ ಹೆಸರೇ ಒಡ ಪಾಂಡೇಶ್ವರ ದೇವಸ್ಥಾನ. ಈ ದೇವಸ್ಥಾನವನ್ನು ಈಗಲೂ ನಾವು ಮಲ್ಪೆಯಲ್ಲಿ ಕಾಣಬಹುದು
ಇನ್ನೊಂದು ಗೋಪಿ ಚಂದನವನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಉಡುಪಿಗೆ ಬರುತ್ತಾರೆ . ಉಡುಪಿಯ ವಿರಜ ತೀರ್ಥದಲ್ಲಿ ಆ ಗೋಪಿಚಂದನವನ್ನು ತೊಳೆದಾಗ ಒಂದು ಸುಂದರವಾದ ಕೃಷ್ಣನ ಸಾಲಿಗ್ರಾಮ ಶಿಲೆ ಗೋಚರವಾಗುತ್ತದೆ ಆ ಶ್ರೀಕೃಷ್ಣ ವಿಗ್ರಹವನ್ನು ಮಧ್ವಾಚಾರ್ಯರು ಉಡುಪಿಯಲ್ಲಿ ಪ್ರತಿಷ್ಠಾಪಿಸುತ್ತಾರೆ ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ಈ ಶ್ರೀ ಕೃಷ್ಣ ವಿಗ್ರಹವೇ ಉಡುಪಿಯ ಶ್ರೀ ಕೃಷ್ಣ ದೇವಸ್ಥಾನ. ಮಧ್ವಾಚಾರ್ಯರ ಅಮೃತ ಹಸ್ತದಿಂದ ಶ್ರೀ ಕೃಷ್ಣನ ಪ್ರತಿಷ್ಠಾಪನೆಯಾಗುತ್ತದೆ ಉಡುಪಿಯ ಶ್ರೀ ಕೃಷ್ಣನನ್ನು ನೋಡುವುದೇ ಚೆಂದ ಉಡುಪಿಯ ಶ್ರೀ ಕೃಷ್ಣ ಮಠದ ಪಕ್ಕದಲ್ಲಿರುವ ಸರೋವರವೇ ಮಧ್ವ ಸರೋವರ
ಪ್ರದೀಪ್ ಚಿನ್ಮಯಿ ಆಸ್ಪತ್ರೆ ಕುಂದಾಪುರ