Home » ಇಂದು ಶ್ರೀಕೃಷ್ಣ ಜನ್ಮಾಷ್ಟಮಿ
 

ಇಂದು ಶ್ರೀಕೃಷ್ಣ ಜನ್ಮಾಷ್ಟಮಿ

by Kundapur Xpress
Spread the love

ಇಂದು ಭಾದ್ರಪದ ಮಾಸ ಕೃಷ್ಣ ಪಕ್ಷದ ಅಷ್ಟಮಿ ತಿಥಿ. ಶ್ರೀ ಕೃಷ್ಣನ 5251 ನೇ ಜನ್ಮೋತ್ಸವ. 30 ವರ್ಷಗಳ ನಂತರ ರೋಹಿಣಿ ನಕ್ಷತ್ರ, ಅಷ್ಟಮಿ ತಿಥಿ, ಬುಧವಾರ, ಚಂದ್ರ ಉಚ್ಚ ಅಂಶ ವೃಷಭ ರಾಶಿಯಲ್ಲಿರುವುದು ಸಂಯೋಗವೇ ಸರಿ. ಸರ್ವಸಿದ್ಧಿ ಯೋಗವಾದ ಇಂದಿನ ದಿನ ವೃತ ಮಾಡಿದರೆ 3 ಜನ್ಮದ ಪಾಪ ಸಮೂಲ ನಷ್ಟವಾಗುವುದು.ಜನ್ಮಾಷ್ಟಮಿ ವೃತ ಮಾಡಿದರೆ ಯಶಸ್ಸು, ಕೀರ್ತಿ, ಪರಾಕ್ರಮ, ಐಶ್ವರ್ಯ, ಸೌಭಾಗ್ಯ, ಸಂತಾನ ಪ್ರಾಪ್ತಿ, ಆರೋಗ್ಯ, ಆಯುಷ್ಯ, ಸುಖ ಸಮೃದ್ಧಿ ದೊರೆಯುವುದು ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

ಶ್ರೀ ಕೃಷ್ಣ ರಾತ್ರಿಯೇ ಏಕೆ ಅವತರಿಸಿದ?

ಶ್ರೀ ಕೃಷ್ಣ ಚಂದ್ರ ವಂಶದವನಾದ್ದರಿಂದ ರಾತ್ರಿ ಅವತರಿಸಿದ, ಬುಧ ಚಂದ್ರನ ಮಗ ಮತ್ತು ರೋಹಿಣಿ ಚಂದ್ರನ ಪತ್ನಿಯಾದ್ದರಿಂದ ರೋಹಿಣಿ ನಕ್ಷತ್ರ, ಬುಧವಾರ ಅವತರಿಸಿದ ಎಂಬ ಪ್ರತೀತಿ ಇದೆ. ಅಷ್ಟಮಿ ಶಕ್ತಿಯ ಪ್ರತೀಕ ವಾದ್ದರಿಂದ ಅಂದು ಅವತರಿಸಿದ ಎನ್ನುತ್ತದೆ ಶಾಸ್ತ್ರ.

ಶ್ರೀ ಕೃಷ್ಣನ ಜೀವನದ ಪ್ರತಿಯೊಂದು ಹೆಜ್ಜೆಯೂ ನಮಗೆ  ಸಂದೇಶ ದೇವಕಿಯ 6 ಮಕ್ಕಳು ಮರಣಿಸಿದ ನಂತರ (7ನೇ ಯವನು ಬಲರಾಮ )ಕೃಷ್ಣ ಅವತರಿಸಿದ ಅಂದರೆ ಅರಿಷಡ್ವೈರಿಗಳು ನಮ್ಮ ಹೃದಯದಿಂದ ಹೋದ ಮೇಲೇ ಭಗವಂತನ ದರ್ಶನವಾಗುತ್ತದೆ.

ಕೃಷ್ಣ ಜೈಲಲ್ಲಿ  ಅವತರಿಸಿದ ತಕ್ಷಣ ದೇವಕಿ ವಸುದೇವರು ಬಂಧ ಮುಕ್ತರಾದರು ಅಂದರೆ ಭಗವಂತನನ್ನು ನಮ್ಮ ಹೃದಯದಲ್ಲಿ ಧಾರಣೆ ಮಾಡಿದರೆ ನಾವೂ ಬಂಧಮುಕ್ತಾರಾಗುತ್ತೇವೆ. ಕೃಷ್ಣ ಅರ್ಜುನನನ್ನೇ ಆರಿಸಿಕೊಂಡ. ಅರ್ಜುನ ಗೃಹಸ್ಥನಾಗಿದ್ದ ಎಲ್ಲಾ ಬಂಧನಗಳಿಂದ ಬಂಧಿಸಲ್ಪಟ್ಟಿದ್ದ. ಅಂದರೆ ಗೀತೆ ಗೃಹಸ್ಥರಿಗೆ ಮಾರ್ಗದರ್ಶಿ. ಕೃಷ್ಣ ಸಾರಥಿಯಾದ. ಅಂದರೆ ಭಗವಂತನನ್ನು ಸಾರಥಿ ಮಾಡಿಕೊಂಡರೆ ಜೀವನ ಎಂದೂ ವಿಫಲವಾಗದು. ಸಂಸಾರ ಎಂಬ ಯುದ್ಧದಲ್ಲಿ ಭಗವಂತ ಸಾರಥಿಯಾದರೆ ಜಯ ನಿಶ್ಚಿತ.

ಪೂತನಿ, ತಾಟಕಿ, ನರಕಾಸುರ, ಬಕಾಸುರ, ಕಾಲಿಯ ಮುಂತಾದ ರಾಕ್ಷಸರು ಅಹಂಕಾರ, ಮದ, ದ್ವೇಷದ ಪ್ರತೀಕವಾಗಿದ್ದರು. ಅವರ ವಧೆ ಅರಿ ಷಡ್ವೈರಿಗಳ ನಾಶದ ಸಂದೇಶ ಕೊಡುತ್ತದೆ. ಪೂತನಿ ಸುಂದರ ರೂಪದಲ್ಲಿ ಬಂದರೂ ಕೃಷ್ಣ ಅವಳನ್ನು ವಧಿಸಿದಾಗ ಅಸಲಿ ರೂಪದಲ್ಲಿ ಕಾಣಿಸಿಕೊಂಡಳು ಅಂದರೆ ಭಗವಂತ ನಮ್ಮ ಜೀವನದಲ್ಲಿ ಬಂದಾಗ  ನಮ್ಮೆಲ್ಲಾ ಅವಗುಣಗಳನ್ನು ದೂರ ಮಾಡಿ ನಮ್ಮ ಅಸಲಿ ರೂಪವಾದ ಶುದ್ಧ ಬುದ್ಧ ಮುಕ್ತ ಆತ್ಮ ಸ್ವರೂಪಕ್ಕೆ ತರುತ್ತಾನೆ.

ಭಗವಂತ ಕಾಳಸರ್ಪ ನಿಧಿಯನ್ನು ಕಾಯುವಂತೆ ಅವನ ಭಕ್ತರನ್ನು ಕಾಯುತ್ತಾನೆ. ಆದರೆ ನಮಗೆ ಭಗವಂತನಿಗೆ ಸಮಯ ಕೊಡಲು ಆಗದೆ ಅವನಿಂದ ದೂರವಾಗಿದ್ದೇವೆ                                              – ಸ್ವರ್ಣ ಕುಂದಾಪುರ

   

Related Articles

error: Content is protected !!