ಕುಂದಾಪುರ : ಕೋಟ ಮೂರ್ಕೈ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯುತ್ತಿದ್ದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಶನಿವಾರ ಬೆಳಗ್ಗಿನ ಜಾವ ನಡೆದಿದೆ
ಈ ಸ್ಥಳದಲ್ಲಿ ನಿರಂತರವಾಗಿ ಕಸ ಎಸೆಯಲಾಗುತ್ತಿದ್ದು ಎಷ್ಟೇ ಸ್ವಚ್ಛಗೊಳಿಸಿದರೂ ಕೂಡ ಮತ್ತೆ ಮತ್ತೆ ಅದೇ ಜಾಗದಲ್ಲಿ ತ್ಯಾಜ್ಯ ರಾಶಿ ಬೀಳುತ್ತಿತ್ತು ಹೀಗಾಗಿ ಸ್ಥಳೀಯ ಯುವಕರು ಹಲವು ದಿನಗಳಿಂದ ತ್ಯಾಜ್ಯ ಎಸೆಯುವವನನ್ನು ಪತ್ತೆಹಚ್ಚವ ಸಲುವಾಗಿ ರಾತ್ರಿ ಪೂರ್ತಿ ನಿದ್ದೆ ಬಿಟ್ಟು ಕಾಯುತ್ತಿದ್ದರು ಶನಿವಾರ ಬೆಳಗಿನ ಜಾವ 2:00 ಗಂಟೆಯ ಸುಮಾರಿಗೆ ಸಾಲಿಗ್ರಾಮ ಬಸ್ ನಿಲ್ದಾಣ ಸಮೀಪದ ಹೊಸದಾಗಿ ತೆರೆಯಲಾದ ಫಾಸ್ಟ್ ಫುಡ್ ಅಂಗಡಿಯವರು ತ್ಯಾಜ್ಯವನ್ನು ತಂದು ಸುರಿಯುವಾಗ ಆರೋಪಿ ಹಾಗು ವಾಹನವನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಈ ಬಗ್ಗೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಆರೋಪಿಗಳಿಗೆ ದಂಡ ವಿಧಿಸುವಂತೆ ಕೋರಲಾಗಿದೆ