Home » 58ನೇ ವರ್ಷದ ಸಂಭ್ರಮದ ಗಣೇಶೋತ್ಸವ
 

58ನೇ ವರ್ಷದ ಸಂಭ್ರಮದ ಗಣೇಶೋತ್ಸವ

ಸೆ. 23 ರಂದು ಶನಿವಾರ ವೈಭವದ ಶೋಭಾಯಾತ್ರೆ

by Kundapur Xpress
Spread the love

ಕುಂದಾಪುರ : ಕುಂದಾಪುರದ ರಾಮಕ್ಷತ್ರಿಯ ಯುವಕ ಮಂಡಳಿ ರಾಮಕ್ಷತ್ರಿಯರ ಸಂಘ (ರಿ.) ಶ್ರೀ ಸೀತಾರಾಮಚಂದ್ರ ದೇವಸ್ಥಾನ ಕುಂದಾಪುರ ಇವರ ಆಶ್ರಯದಲ್ಲಿ ಸೆಪ್ಟೆಂಬರ್ 19 ರಿಂದ ಸೆಪ್ಟೆಂಬರ್23 ರವರೆಗೆ 58 ನೇ ವರ್ಷದ ಗಣೇಶೋತ್ಸವವನ್ನು ಆಯೋಜಿಸಲಾಗಿದ್ದು, ಸೆಪ್ಟೆಂಬರ್ 23 ರಂದು ಸಂಭ್ರಮದ ಶೋಭಾಯಾತ್ರೆ ನಡೆಯಲಿದೆ ಎಂದು ರಾಮಕ್ಷತ್ರಿಯ ಯುವಕ ಮಂಡಳಿಯ ಅಧ್ಯಕ್ಷರಾದ ಮಹೇಶ್‌ ಬೆಟ್ಟಿನ್ ತಿಳಿಸಿದ್ದಾರೆ. ಸೆಪ್ಟೆಂಬರ್ 19 ರಂದು ಬೆಳಿಗ್ಗೆ ಶ್ರೀ ಗಣೇಶ ವಿಗ್ರಹದ ಪ್ರತಿಷ್ಠಾಪನೆ ಹಾಗೂ ಪ್ರಾಣ ಪ್ರತಿಷ್ಠೆ, ಗಣಹೋಮ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ, ಸಂಜೆ 6.00 ಕ್ಕೆ ಉಡುಪಿಯ ಬಿ. ನಾಗರಾಜ ಶೇಟ್ ಮತ್ತು ಬಳಗದವರಿಂದ ಭಕ್ತಿ ಸುಗಮ ಸಂಗೀತ. ರಾತ್ರಿ 8.00 ಕ್ಕೆ ಮಹಾಪೂಜೆ ಪ್ರಸಾದ ವಿತರಣೆ.

ದಿನಾಂಕ ಸೆಪ್ಟೆಂಬರ್ 20 ರಂದು ಬೆಳಿಗ್ಗೆ 11.00 ಗಂಟೆಗೆ ಗಣಹೋಮ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ, ಸಂಜೆ 6.00 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು ದಿನೇಶ್ ಪ್ರಿಂಟರ್ಸ್‌  ಬೆಂಗಳೂರು ಇದರ ಮಾಲಕರಾದ ದಿನೇಶ್ ಕುಂದಾಪುರ ರವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಸಭಾಧ್ಯಕ್ಷತೆಯನ್ನು ರಾಮಕ್ಷತ್ರಿಯರ ಸಂಘದ ಅಧ್ಯಕ್ಷರಾದ ಡಿ.ಕೆ. ಪ್ರಭಾಕರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ರಾಜೇಂದ್ರ, ಯುನೈಟೆಡ್ ಏರ್‌ಲೈನ್ಸ್ನ ಶ್ರೀವತ್ಸ ಮದ್ದೋಡಿ ಹಾಗೂ ಮಂಗಳೂರು ಫಾಧರ್‌ ಮುಲ್ಲರ್ಸ್‌ ಮೆಡಿಕಲ್ ಕಾಲೇಜಿನ ಪ್ರೋ. ಡಾ. ಶುಭಾ ನಾರಾಯಣ ರಾವ್ ಆಗಮಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೋಟೇಶ್ವರ ವಿಘ್ನೇಶ್ವರ ಪ್ಲಾಸ್ಟಿಕ್ ಇಂಡಸ್ಟ್ರೀಸ್‌ ನವರ ಪ್ರಾಯೋಜಕತ್ವದ “ನೃತ್ಯ ವೈಭವ” ನಡೆಯಲಿದೆ.

ದಿನಾಂಕ ಸೆಪ್ಟೆಂಬರ್ 21 ರಂದು ಬೆಳಿಗ್ಗೆ ಗಣಹೋಮ, ಮಹಾಪೂಜೆ ಪ್ರಸಾದ ವಿತರಣೆ, ಸಂಜೆ 4.00 ಕ್ಕೆ ಸಾಂಸ್ಕೃತಿಕ ಕಲಾವೈಭವ ನಡೆಯಲಿದ್ದು, 7.00 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಮಕ್ಷತ್ರಿಯರ ಸಂಘದ ಅಧ್ಯಕ್ಷರಾದ ಡಿ.ಕೆ. ಪ್ರಭಾಕರ ಸಭಾಧ್ಯಕ್ಷತೆ ವಹಿಸಿಕೊಳ್ಳಲಿದ್ದು ಮುಖ್ಯ ಅತಿಥಿಗಳಾಗಿ ಮಂಜುನಾಥ ಕೆ ಎನ್‌  ಡಾ| ಲಕ್ಷ್ಮೀನಾರಾಯಣ ಬಿಜೂರುಉಲ್ಲಾಸ್ ಡಿ. ಕೋಟೆಗಾರ್ ಹಾಗೂ ಶಿಶಿರ್ ಡಿ.ಕೆ. ಭಾಗವಹಿಸಲಿದ್ದಾರೆ

ಸೆಪ್ಟೆಂಬರ್ 22 ರಂದು ಬೆಳಿಗ್ಗೆ 11.00 ಕ್ಕೆ ಗಣಹೋಮ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.  ಸಂಜೆ 4.00 ಗಂಟೆಗೆ ಪುಟಾಣಿ ರಾಜ ಪುಟಾಣಿ ರಾಣಿ ಸ್ಪರ್ಧೆ ನಡೆಯಲಿದೆ. ಸಂಜೆ 7.00 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಡಿ.ಕೆ. ಪ್ರಭಾಕರ ಸಭಾಧ್ಯಕ್ಷತೆ ವಹಿಸಿಕೊಳ್ಳಲಿದ್ದು ಮುಖ್ಯ ಅತಿಥಿಗಳಾಗಿ ಪಿ. ಶ್ರೀಧರ್, ಕಾರ್ತಿಕೇಯ ಎಂಟರ್‌ ಪ್ರೈಸಸ್‌ ನಾ ಮಾಲಕರಾದ ರವೀಂದ್ರ ಉಳ್ಳೂರು, ಕೆ. ಶ್ರೀನಿವಾಸ ಸೇರ್ವೆಗಾರ್ ಹಾಗೂ ವರುಣ್ ಕುಮಾರ್ ಕೆ. ಭಾಗವಹಿಸಲಿದ್ದಾರೆ.  ರಾತ್ರಿ 8.00 ಕ್ಕೆ ನಿಮ್ಮ ಪ್ರತಿಭೆ ನಮ್ಮ ವೇದಿಕೆ ಕಾರ್ಯಕ್ರಮ ಜರುಗಲಿರುವುದು

ದಿನಾಂಕ 23 ರಂದು ಬೆಳಿಗ್ಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಹಾಪೂಜೆ ಪ್ರಸಾದ ವಿತರಣೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4.30 ಕ್ಕೆ ನೃತ್ಯ ರೂಪಕ, ಸ್ಥಬ್ಧ ಚಿತ್ರ ಹಾಗೂ ಚಿತ್ರಣದೊಂದಿಗೆ ವೈಭವ ಪುರ ಮೆರವಣಿಗೆಯು ನಗರದ ಮುಖ್ಯ ರಸ್ತೆಯಲ್ಲಿ ಸಾಗಿ ಪಂಚಗಂಗಾವಳಿ ನದಿಯಲ್ಲಿ ವಿಸರ್ಜನೆ ನಡೆಸಲಾಗುವುದೆಂದು ಅಧ್ಯಕ್ಷರಾದ ಮಹೇಶ್ ಬೆಟ್ಟಿನ್ ಹಾಗೂ ಕಾರ್ಯದರ್ಶಿ K.B ವಿಷ್ಣು ತಿಳಿಸಿದ್ದಾರೆ.

   

Related Articles

error: Content is protected !!