ಬೆಂಗಳೂರು : ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತೆ ಚೈತ್ರಾ ಕುಂದಾಪುರ ರವರ ವಿಚಾರಣೆ ಗುರುವಾರ ಆರಂಭಗೊಂಡಿದೆ ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಕೇಂದ್ರ ಬಿಜೆಪಿ ಚುನಾವಣಾ ಸಮಿತಿ ಸದಸ್ಯನ ಪಾತ್ರ ನಿರ್ವಹಿಸಿದ್ದ ಚೆನ್ನ ನಾಯ್ಕ್ನನ್ನು ಬಂಧಿಸಲಾಗಿದೆ
ಕರಾವಳಿ ಮೂಲದ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಬಹುಕೋಟಿ ಹಣವನ್ನು ವಂಚನೆಗೈದಿರುವ ಆರೋಪವನ್ನು ಚೈತ್ರ ಕುಂದಾಪುರ ಎದುರಿಸುತ್ತಿದ್ದಾರೆ ಬುಧವಾರ ಸಿಸಿಬಿ ಪೊಲೀಸರು ಚೈತ್ರಾಳನ್ನು ಬಂಧಿಸಿದ್ದು ಬೆಂಗಳೂರು ನಗರದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದರು ಗುರುವಾರ ಬೆಳಿಗ್ಗೆ ಪೊಲೀಸರು ಚೈತ್ರಾಳನ್ನು ಸಿಸಿಬಿ ಕಚೇರಿಗೆ ವಿಚಾರಣೆಗೆ ಕರೆತರಲಾಗಿದ್ದು ಈ ವೇಳೆ ಪೊಲೀಸ್ ಕಾರಿನಿಂದ ಇಳಿಯುತ್ತಿದ್ದಂತೆ ಮಾಧ್ಯಮದವರನ್ನು ಕಂಡು ಸ್ವಾಮೀಜಿ ಸಿಕ್ಕಿಬೀಳಲಿ ಎಲ್ಲಾ ಸತ್ಯಾಂಶಗಳು ಹೊರ ಬರಲಿದೆ ಎಂಬ ಹೇಳಿಕೆ ನೀಡಿದ್ದಾಳೆ ಸ್ವಾಮೀಜಿ ಸಿಕ್ಕಿ ಬೀಳಲಿ ಅಸಲಿಯಾಗಿ ಎಲ್ಲಾ ಸತ್ಯಗಳು ಹೊರಬೀಳಲಿದೆ ಇಂದಿರಾ ಕ್ಯಾಂಟೀನ್ ಗೆ ಸಂಬಂಧಿಸಿದಂತೆ ಬಾಕಿ ಇರುವ ಬಿಲ್ ಇನ್ನೂ ಪೆಂಡಿಂಗ್ ಇದೆ ಹಾಗಾಗಿ ಈ ಷಡ್ಯಂತ್ರ ಮಾಡಿದ್ದಾರೆ ನಾನು ಪ್ರಮುಖ ಆರೋಪಿಯಾಗಿದ್ದರೂ ಸ್ವಾಮೀಜಿ ಸಿಕ್ಕಿ ಹಾಕೊಳ್ಳಲಿ ಸತ್ಯಾಂಶ ಹೊರಬರಲಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ ಇಂದಿರಾ ಕ್ಯಾಂಟೀನ್ ಬಿಲ್ ಬಾಕಿ ಬಗ್ಗೆಯೂ ತನಿಖೆ ಆರಂಭಿಸಲಾಗಿದೆ ಹೀಗಾಗಿ ದೂರುದಾರ ಗೋವಿಂದಬಾಬು ಪೂಜಾರಿಗೂ ಈ ಕುರಿತು ಮಾಹಿತಿ ನೀಡುವಂತೆ ತನಿಖಾಧಿಕಾರಿಗಳು ಸೂಚಿಸಿದ್ದಾರೆ
ಪ್ರಕರಣದ ಐದನೇ ಆರೋಪಿ ಕೇಂದ್ರ ಬಿಜೆಪಿಯ ಚುನಾವಣಾ ಸಮಿತಿಯ ಸದಸ್ಯನ ಪಾತ್ರ ನಿರ್ವಹಿಸಿದ್ದ ಬೆಂಗಳೂರಿನ ಕೆ ಆರ್ ಪುರ ನಿವಾಸಿ ಚೆನ್ನ ನಾಯ್ಕ್ ಯಾನೆ ಕಬಾಬ್ ನಾಯ್ಕ್ ನನ್ನು ಪೊಲೀಸರು ಬಂಧಿಸಿದ್ದಾರೆ ಈತನನ್ನು ಹೆಚ್ಚಿನ ವಿಚಾರಣೆಗಾಗಿ ಹತ್ತು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಇತನಿಗೆ ಮಾಧ್ಯಮ ಪ್ರತಿನಿಧಿಯೊಬ್ಬ ಆಶ್ರಯ ನೀಡಿದ್ದ ಎಂಬುದಾಗಿ ಸಿಸಿಬಿ ಮೂಲಗಳು ತಿಳಿಸಿದೆ
ತಾಯಿ ರೋಹಿಣಿ ಹೇಳಿಕೆ
ನನ್ನ ಮಗಳು ಚೈತ್ರಾ ಬೇರೊಬ್ಬರ ಹಣಕ್ಕೆ ಎಂದೂ ಆಸೆ ಪಟ್ಟವಳಲ್ಲ ಎಂದು ಚ್ಯತ್ರಾಳ ತಾಯಿ ಪ್ರತಿಕ್ರಿಯಿಸಿದ್ದಾರೆ ನನ್ನ ಮಗಳ ವಿರುದ್ಧ ಬಂದಿರುವ ಕೋಟಿಗಟ್ಟಲೆ ಹಣ ವಂಚನೆಯ ಆರೋಪದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಕೋಟಿಗಟ್ಟಲೇ ಹಣ ಯಾರು ತಿಂದರೋ ಗೊತ್ತಿಲ್ಲ ಈ ಪ್ರಕರಣದಲ್ಲಿ ನನ್ನ ಮಗಳನ್ನು ಗುರಿ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ