Home » ಚೈತ್ರಾ ವಂಚನೆ ಪ್ರಕರಣ ನಗದು ಚಿನ್ನ ವಶ
 

ಚೈತ್ರಾ ವಂಚನೆ ಪ್ರಕರಣ ನಗದು ಚಿನ್ನ ವಶ

by Kundapur Xpress
Spread the love

ಕುಂದಾಪುರ : ಬೈಂದೂರು ಬಿಜೆಪಿ ಟಿಕೆಟ್‌ ವಂಚನೆ ಪ್ರಕರಣಕ್ಕೆ ಸಂಭಂಧಿಸಿದಂತೆ ಬೆಂಗಳೂರು ಸಿ ಸಿ ಬಿ ಪೊಲೀಸರು ಚೈತ್ರಾಳ ಆಪ್ತ ಸ್ನೇಹಿತ ಶ್ರೀಕಾಂತ್‌ ನನ್ನು ಮಹಜರು ಮತ್ತು ಆಸ್ತಿ ವಶ ಪ್ರಕ್ರೀಯೆಗಾಗಿ ಉಡುಪಿಯ ಉಪ್ಪೂರಿಗೆ ಕರೆ ತಂದಿದ್ದಾರೆ

ಕುಂದಾಪುರ ಮೂಲದ ಉಪ್ಪೂರಿನ ಸೊಸೈಟಿಯೊಂದರ ಶಾಖೆಯ ಲಾಕರ್‌ ನಲ್ಲಿ ಇಟ್ಟಿದ್ದ ನಗದು ಮತ್ತು ಚಿನ್ನಾಭರಣವನ್ನು ಸಿ ಸಿ ಬಿ ಪೊಲೀಸರು ಮುಟ್ಟುಗೋಲು ಹಾಕಿದ್ದಾರೆಂದು ತಿಳಿದು ಬಂದಿದೆ

ಅಂದಾಜಿನ ಪ್ರಕಾರ  ಸೊಸೈಟಿಯ ಲಾಕರ್‌ ನಲ್ಲಿ 40 ಲಕ್ಷ ರೂ. ನಗದು ಹಾಗೂ 60 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಆಸ್ತಿಗೆ ಸಂಭಂಧಿಸಿದಂತೆ ಕಾಗದ ಪತ್ರಗಳು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿದೆ

ಚೈತ್ರಾ ಕುಂದಾಪುರ ತನ್ನ ಆಪ್ತ ಗೆಳೆಯ ಶ್ರೀಕಾಂತನ ಹೆಸರಿನಲ್ಲಿ ಹಿರಿಯಡಕ ಸಮೀಪದಲ್ಲಿ ಎರಡು ಅಂತಸ್ತಿನ ಮನೆ ನಿರ್ಮಿಸುತ್ತಿದ್ದು ಕಾಮಗಾರಿ ಈಗ ಅರ್ಧದಲ್ಲೆ ನಿಂತಿದೆ   

   

Related Articles

error: Content is protected !!