ಸೌತಡ್ಕ ಮಹಾಗಣಪತಿ ದೇವಸ್ಥಾನವು ಅತ್ಯಂತ ಪುರಾತನ ಮತ್ತು ವಿಶಿಷ್ಟ ಶೈಲಿಯ ದೇವಸ್ಥಾನಗಳೆಲ್ಲೊಂದು. ಈ ದೇವಸ್ಥಾನಕ್ಕೆ 800 ವರ್ಷಗಳ ಹಿಂದಿನ ಇತಿಹಾಸವಿದೆ. ಇದು ಬೇರೆ ಎಲ್ಲಾ ಗಣಪತಿ ದೇವಸ್ಥಾನಗಳಿಗಿಂತ ವಿಭಿನ್ನ ಶೈಲಿಯಲ್ಲಿ ಇರುವಂತಹ ತೆರೆದ ಜಾಗದಲ್ಲಿ ಇರುವ ಗಣಪತಿ ದೇವಸ್ಥಾನ ಎಂದರೆ ತಪ್ಪಾಗಲಾರದು ಗಣಪತಿ ಎಂದರೆ ವಿಘ್ನ ವಿನಾಶಕ ಪ್ರತಿಯೊಂದು ಒಳ್ಳೆಯ ಕೆಲಸ ಶುರು ಮಾಡಬೇಕಾದರೂ ಕೂಡ ಗಣಪತಿಯ ಪೂಜೆ ಮಾಡುವುದು ಸಂಪ್ರದಾಯ. ಸೌತಡ್ಕ ಗಣಪತಿ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಿಂದ ಸುಮಾರು 3 ಕಿ.ಮೀ ದೂರದಲ್ಲಿದೆ ತೆರೆದ ಬಯಲು ಪ್ರದೇಶದಲ್ಲಿರುವ ಈ ಗಣಪತಿ ಭಕ್ತರ ಪಾಲಿನ ಆರಾಧ್ಯ ದೈವ ಧರ್ಮಸ್ಥಳದಿಂದ ಕೂಡ ಸುಮಾರು ಹದಿನಾರು ಕಿಲೋಮೀಟರ್ ದೂರದಲ್ಲಿರುವ ಈ ಕ್ಷೇತ್ರ ಭಕ್ತರ ಪಾಲಿನ ಧಾರ್ಮಿಕ ಕ್ಷೇತ್ರ ಎಂದು ಹೇಳಬಹುದು
ಪ್ರಶಾಂತವಾದಂತಹ ಪರಿಸರದಲ್ಲಿರುವ ಈ ಗಣಪತಿ ದೇವಸ್ಥಾನ ಭಕ್ತರಿಗೆ ಪ್ರಾರ್ಥನೆಗಳನ್ನು ಮಾಡಲು ಕೂಡ ಅತ್ಯಂತ ಶ್ರೇಷ್ಠವಾದಂತಹ ಸ್ಥಳ ಎಂದು ಪ್ರಸಿದ್ಧಿ ಪಡೆದಿದೆ . ಸೌತಡ್ಕ ದೇವಸ್ಥಾನದ ಸುತ್ತಲೂ ಅನೇಕ ಗಂಟೆಗಳಿಂದ ಗಣೇಶನನ್ನು ಅಲಂಕರಿಸಲಾಗಿದೆ ಭಕ್ತರ ಮನೋಕಾಮನೆಗಳು ಸಿದ್ಧಿಸಿದ ನಂತರ ಭಕ್ತರು ಗಂಟೆಗಳನ್ನು ತಂದು ಗಣೇಶನಿಗೆ ಅರ್ಪಿಸುತ್ತಾರೆ . ಹೀಗೆ ಅರ್ಪಿಸಿದ ಅನೇಕ ಗಂಟೆಗಳು ದೇವಸ್ಥಾನದ ಸುತ್ತ ನಾವು ಕಾಣಬಹುದು ಸ್ಥಳ ಪುರಾಣದ ಪ್ರಕಾರ ರಾಜಮನೆತನದವರು ಪೂಜಿಸುತ್ತಿದ್ದ ಗಣಪತಿ ವಿಗ್ರಹ ಶತ್ರುಗಳ ದಾಳಿಗೆ ಸಿಕ್ಕಿಕೊಂಡಾಗ ದೇವಾಲಯದಲ್ಲಿದ್ದ ಸುಂದರವಾದ ಗಣಪತಿ ವಿಗ್ರಹವನ್ನು ಸೌತೆಕಾಯಿ ಹೇರಳವಾಗಿ ಬೆಳೆಯುವಂತಹ ಸ್ಥಳದಲ್ಲಿ ಪ್ರತಿಷ್ಠಾಪಿಸಿದರಂತೆ. ಅದಕ್ಕಾಗಿಯೇ ಈ ಪ್ರದೇಶಕ್ಕೆ ಸೌತಡ್ಕ ಎಂಬ ಹೆಸರು ಬಂದಿದೆ
ಪ್ರದೀಪ್ ಚಿನ್ಮಯಿ ಆಸ್ಪತ್ರೆ ಕುಂದಾಪುರ