ಬೆಂಗಳೂರು : ನಿನ್ನೆ ಸಿ ಸಿ ಬಿ ಪೊಲೀಸರಿಂದ ಬಂಧನಕ್ಕೊಳಗಾದ ಹಿರೇ ಹಡಗಲಿಯ ಹಾಲಾಶ್ರೀ ಸ್ವಾಮೀಜಿಯನ್ನು ಇಂದು ಬೆಳಿಗ್ಗೆ ಬೆಂಗಳೂರಿನ 9 ನೇ ಎ ಸಿ ಎಂ ಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಸ್ವಾಮೀಜಿಯನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ
ವಿಚಾರಣೆ ಆರಂಭಿಸಿದ ಬೆಂಗಳೂರು ಸಿ ಸಿ ಬಿ ತಂಡ ಕೆಲವೊಂದು ಮಾಹಿತಿಗಳನ್ನು ಕಲೆ ಹಾಕಿ ಹಾಲಾಶ್ರೀ ಮಠಕ್ಕೆ ತೆರಳಿ 60 ಲಕ್ಷ ನಗದನ್ನು ವಶಪಡಿಸಿಕೊಂಡಿದೆ
ಸ್ವಾಮೀಜಿಯು ಬೆಂಗಳೂರು ಮತ್ತು ಮೈಸೂರಿನ ಕೆಲವೊಂದು ವ್ಯಕ್ತಿಗಳಿಗೆ ಹಣ ನೀಡಿದ್ದು ಮಠದ ಪಕ್ಕದಲ್ಲಿರುವ 30 ಎಕ್ರೆ ಜಮೀನನ್ನು ಖರೀದಿ ಮಾಡಿರುವುದಾಗಿ ಸಿ ಸಿ ಬಿ ಮೂಲಗಳು ತಿಳಿಸಿದೆ