Home » ವಕೀಲರ ಮದ್ಯ ಪ್ರವೇಶ : ಮಠದಲ್ಲಿ 56 ಲಕ್ಷ
 

ವಕೀಲರ ಮದ್ಯ ಪ್ರವೇಶ : ಮಠದಲ್ಲಿ 56 ಲಕ್ಷ

by Kundapur Xpress
Spread the love

ಬೆಂಗಳೂರು :  ಸಿ ಸಿ ಬಿ ಪೊಲೀಸರಿಂದ ಬಂಧನಕ್ಕೊಳಗಾದ ಹಿರೇ ಹಡಗಲಿಯ ಹಾಲಾಶ್ರೀ ಸ್ವಾಮೀಜಿಯನ್ನುನಿನ್ನೆ ಬೆಳಿಗ್ಗೆ 9 ನೇ ಎ ಸಿ ಎಂ ಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಸ್ವಾಮೀಜಿಯನ್ನು ಸೆ.29 ರ ವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿದೆ ವಿಚಾರಣೆ ಆರಂಭಿಸಿದ ಬೆಂಗಳೂರು ಸಿ ಸಿ ಬಿ ತಂಡ ಕೆಲವೊಂದು ಪ್ರಮುಖ ಮಾಹಿತಿಗಳನ್ನು ಕಲೆ ಹಾಕಿದೆ

ಮೈಸೂರಿನ ವಕೀಲರೊಬ್ಬರು 56 ಲಕ್ಷ ರೂಪಾಯಿ ನಗದನ್ನು ಮಠದಲ್ಲಿ ತಂದಿಟ್ಟಿದ್ದು ಇದು ಅಭಿನವ ಹಾಲಾಶ್ರೀ ಸ್ವಾಮೀಜಿಯವರಿಗೆ ಸೇರಿದ ಹಣ ಎಂದು ಹೇಳಿ ವಾಪಾಸು ತೆರಳಿದ್ದಾರೆ ಇದೀಗ ಸಿಸಿಬಿ ಪೊಲೀಸರು ಈ ದುಡ್ಡಿನ ಮೂಲದ ಬಗ್ಗೆ ಹುಡುಕುತ್ತಿದ್ದು ಹಾಲಾಶ್ರೀ ಸ್ವಾಮೀಜಿಯನ್ನು ತೀವ್ರ ವಿಚಾರಣೆಗೆ ಗುರಿಪಡಿಸಿ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ

ಮೈಸೂರಿನ ಉದ್ಯಮಿ ಹಾಗೂ ವಕೀಲರಾದ ಪ್ರಣವ್‌ ವೀಡಿಯೊ ಮಾಡಿದ್ದು ಈ ಹಣವನ್ನು ನನ್ನ ಮೈಸೂರಿನ ಕಚೇರಿಯಲ್ಲಿ ಸ್ವಾಮೀಜಿಯವರ ಕಾರು ಚಾಲಕ ರಾಜು ತಂದು ಕೊಟ್ಟಿರುತ್ತಾನೆ. ಈ ಹಣ ಯಾರಿಗೆ ಸೇರಬೇಕು ಎಂಬುದು ನನಗೆ ಮಾಹಿತಿ ಇಲ್ಲ ಈಗ ಅವರ ತಂದೆ ಹಿರೇಹಡಗಲಿ ಮಠದಲ್ಲಿ ವಾಸವಿದ್ದು ಅವರಿಗೆ ಈ ಹಣ ತಲುಪಿಸಲು ಈಗ ಹೋಗುತ್ತಿದ್ದು ಹಾಲಾಶ್ರೀ ಸ್ವಾಮೀಜಿಯ ಕಾರು ಚಾಲಕ 60 ಲಕ್ಷ ಕೊಟ್ಟಿದ್ದರು ಅದರಲ್ಲಿ 4 ಲಕ್ಷ ರೂ.ನಗದನ್ನು ವಕೀಲರ ಶುಲ್ಕವೆಂದು ತೆಗೆದುಕೊಂಡು 56 ಲಕ್ಷ ರೂಪಾಯಿ ನನ್ನ ಕಚೇರಿಯಲ್ಲಿ ಇಟ್ಟು ಹೋಗಿರುತ್ತಾರೆ. ಇಷ್ಟು ದಿನವಾದರೂ ಅವರು ಬಾರದ ಕಾರಣ ಈ ಹಣವನ್ನು ಹಾಲಾಶ್ರೀ ಮಠದಲ್ಲಿರುವ ಅವರ ಅಪ್ಪನವರಿಗೆ ಕೊಡುತ್ತೇನೆ ಎಂದು ವಿಡಿಯೋವನ್ನು ಮಾಡಿದ್ದಾನೆ ಇದಾದ ನಂತರ ಮಠದಲ್ಲಿ ದುಡ್ಡನ್ನು ಇಟ್ಟಿರುವ ದೃಶ್ಯವನ್ನು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾನೆ

   

Related Articles

error: Content is protected !!