ಕುಂದಾಪುರ : ಎಳವೆಯಲ್ಲಿಯೇ ಮಕ್ಕಳ ಆಸಕ್ತಿ ಹಾಗೂ ಅಭಿರುಚಿಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು ತಂದೆ ತಾಯಿಯವರ ಕರ್ತವ್ಯವಾಗಿದ್ದು ಇತ್ತೀಚಿನ ದಿನಗಳಲ್ಲಿ ಮೊಬೈಲ್ ಟಿವಿ ಇನ್ನಿತರ ಸಾಧನಗಳಿಂದ ಮಕ್ಕಳ ವಿಧ್ಯಾಭ್ಯಾಸಕ್ಕೆ ಅಡಚಣೆ ಉಂಟಾಗುತ್ತಿದ್ದು ಮಕ್ಕಳ ಗ್ರಹಿಕಾ ಶಕ್ತಿಯು ಕುಂಠಿತವಾಗಿದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಎಕಾಗ್ರತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಯು ಎಸ್ ಏ ಯ ಮೈಕ್ರೋಸಾಫ್ಟ್ ಸೀನಿಯರ್ ಟಕ್ನಿಕಲ್ ಲೀಡರ್ ಶಿಶಿರ್ ಡಿ ಕೆ ನುಡಿದರು ಅವರು ನಗರದ ರಾಮಕ್ಷತ್ರಿಯ ಯುವಕ ಮಂಡಳಿಯ 58 ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು
ಸಭಾಧ್ಯಕ್ಷತೆಯನ್ನು ರಾಮಕ್ಷತ್ರಿಯರ ಸಂಘದ ಅಧ್ಯಕ್ಷರಾದ ಡಿ.ಕೆ. ಪ್ರಭಾಕರ್ ರವರು ವಹಿಸಿಕೊಂಡಿದ್ದು ಮುಖ್ಯ ಅತಿಥಿಗಳಾಗಿ ಕೊಪ್ಪದ ಎ ಸಿ ಎಫ್ ಮಂಜುನಾಥ ಕೆ ಎನ್ ಡಾ| ಲಕ್ಷ್ಮೀನಾರಾಯಣ ಬಿಜೂರು, ಉಲ್ಲಾಸ್ ಡಿ. ಕೋಟೆಗಾರ್ ಭಾಗವಹಿಸಿದ್ದರು ವೇದಿಕೆಯಲ್ಲಿ ರಾಮಕ್ಷತ್ರಿಯ ಯುವಕ ಮಂಡಳಿಯ ಅಧ್ಯಕ್ಷರಾದ ಮಹೇಶ್ ಬೆಟ್ಟಿನ್ ಗೌರವಾಧ್ಯಕ್ಷರಾದ ಶ್ರೀನಿವಾಸ್ ಇಂಜೀನಿಯರ್ ಖಜಾಂಚಿ ನಾಗರಾಜ್ ದಫೇದಾರ ನಿಯೋಜಿತ ಅಧ್ಯಕ್ಷ ಪ್ರಭಾಕರ ನೇರಂಬಳ್ಳಿ ಕಾರ್ಯದರ್ಶಿ ಕೆ ಬಿ ವಿಷ್ಣು ಮಹಿಳಾ ಮಂಡಳಿಯ ಅಧ್ಯಕ್ಷೆ ವಿದ್ಯಾಲಕ್ಷೀ ವಿಶ್ವನಾಥ್ ಉಪಸ್ಥಿತರಿದ್ದರು
ಗಣೇಶೋತ್ಸವದ ನಿಮಿತ್ತ ಎರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ 8 ರಿಂದ ಪಿ ಯು ಸಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಬಹುಮಾನಗಳನ್ನು ವಿತರಿಸಲಾಯಿತು ರತ್ನಾಕರ ನಿರೂಪಿಸಿದ ಕಾರ್ಯಕ್ರಮದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಮಹೇಶ್ ಬೆಟ್ಟಿನ್ ಸ್ವಾಗತಿಸಿ ವಿಷ್ಣು ಕೆ ಬಿ ವಂದಿಸಿದರು ಇದೇ ಸಂದರ್ಭದಲ್ಲಿ ಡಾ. ಲಕ್ಷ್ಮೀನಾರಾಯಣ ಬಿಜೂರು ರವರನ್ನು ಯುವಕ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು