ಕುಂದಾಪುರ : ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಪ್ರಮುಖ ಆರೋಪಿಯಾದ ಚೈತ್ರಾ ಕುಂದಾಪುರ ಹೆಸರಿನ ಜೊತೆಗೆ ಕುಂದಾಪುರ ತಾಲೂಕಿನ ಹೆಸರು ಮಾಧ್ಯಮಗಳಲ್ಲಿ ಬಳಸಲು ಬೆಂಗಳೂರಿನ ಕೋರ್ಟ್ ತಾತ್ಕಾಲಿಕ ನಿರ್ಬಂಧ ವಿಧಿಸಿದೆ
ಕುಂದಾಪುರದ ಹೆಸರು ಆರೋಪಿ ಒಬ್ಬರ ಹೆಸರಿನ ಕೊನೆಯ ಭಾಗವಾಗಿರುವ ಕಾರಣಕ್ಕೆ ಹಾಳಾಗಬಾರದು ಆರೋಪಿಯನ್ನು ಉಲ್ಲೇಖಿಸುವಾಗ ಕುಂದಾಪುರ ಎಂದು ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತಿರುವಾಗ ಕುಂದಾಪುರ ತಾಲೂಕಿನ ಹೆಸರಿಗೆ ಧಕ್ಕೆಯಾಗುತ್ತಿದ್ದು ಕುಂದಾಪುರದ ಜನರಿಗೆ ಅವಮಾನವಾಗುತ್ತಿದೆ ಎಂದು ಬೆಂಗಳೂರಿನ ನಿವಾಸಿಯಾದ ಗಣೇಶ್ ಶೆಟ್ಟಿ ಎಂಬವರು ಕೋರ್ಟ್ ಮೊರೆ ಹೋಗಿದ್ದರು ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಚೈತ್ರಾ ಸುದ್ದಿ ಪ್ರಕಟ ಮಾಡುವಾಗ ಕುಂದಾಪುರ ಹೆಸರನ್ನು ಬಳಸದಂತೆ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿ ಆದೇಶ ನೀಡಿದೆ