ಕುಂದಾಪುರ ಶಾಖೆಯ ಹದಿಮೂರನೇ ವಾರ್ಷಿಕ ಮಹಾ ಸಭೆಯು 23-09-2023 ರ ಶನಿವಾರ ಸಂಜೆ ಲಕ್ಷ್ಮೀ ನರಸಿಂಹ ಕಲಾಮಂದಿರ, ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇಲ್ಲಿ ಜರಗಿತು. ರೆಡ್ ಕ್ರಾಸ್ ಅಧ್ಯಕ್ಷರೂ ಹಾಗೂ ಕುಂದಾಪುರ ಉಪವಿಭಾಗ ಅಧಿಕಾರಿಯವರಾದ ರಶ್ಮಿ ಎಸ್. ಆರ್. ಇವರ ಅನುಮತಿಯ ಮೇರೆಗೆ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಇವರ ಅಧ್ಯಕ್ಷತೆ ಯಲ್ಲಿ ಜರುಗಿತು. ಉಪ ಸಭಾಪತಿ ಡಾ. ಉಮೇಶ್ ಪುತ್ರನ್ ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು. ಅಧ್ಯಕ್ಷರಾದ ಜಯಕರ ಶೆಟ್ಟಿ ಯವರು ಪ್ರಾಸ್ತಾವಿಕ ಮಾತನಾಡಿ ಭಾರತೀಯ ರೆಡ್ ಕ್ರಾಸ್ ಕಳೆದ ಹದಿಮೂರು ವರ್ಷದಿಂದ ಮಾಡಿದ ಸಾಧನೆ ಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಸದಸ್ಯರಿಂದ ದೇಣಿಗೆ ಸಂಗ್ರಹಿಸಿ ಕಟ್ಟಡ ಮತ್ತು ಅತೀ ಅಗತ್ಯ ವಿರುವ ಮಷಿನರಿ ಅಳವಡಿಸಿ 2015 ಮೇ ಯಲ್ಲಿ ರಕ್ತ ನಿಧಿ ಕೇಂದ್ರ ವನ್ನು ಸ್ಥಾಪಿಸಲಾಯಿತು.
ಈಗ ನಾವು ಸುಮಾರು ಎರಡುವರೆ ಕೋಟಿ ರೂಪಾಯಿ ಮಷಿನರಿ ಹೊಂದಿದ್ದೇವೆ. ನಮ್ಮ ಎರಡನೇ ಸಾಧನೆ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಜನ ಔಷಧಿ ಕೇಂದ್ರ ಸ್ಥಾಪಿಸಿ ಗುಣಮಟ್ಟದ ಔಷದ ಅತೀ ಕಡಿಮೆ ದರದಲ್ಲಿ ಜನರಿಗೆ ಒದಗಿಸುತ್ತಿದೆ. ಪ್ರಸ್ತುತ ಎರಡುವರೆ ಕೋಟಿ ವ್ಯವಹಾರ ನಡೆಸುತ್ತದೆ. ಇದಲ್ಲದೇ ಉಚಿತ E.C.G ಮತ್ತು ಉಚಿತ ಓಕ್ಸಿಜನ್ ಕೋನ್ಸಂಟ್ರೇಟರ್ ಅಗತ್ಯ ವಿರುವ ರೋಗಿಗಳಿಗೆ ನೀಡಲಾಗುತ್ತಿದೆ. ಈ ವರೆಗೆ ನೂರಕ್ಕಿಂತ ಹೆಚ್ಚು ಜನರು ಇದರ ಪ್ರಯೋಜನ ಪಡೆದರು. ಹಳ್ಳಿಯ ಹಲವು ಸರಕಾರಿ ಶಾಲೆಗಳನ್ನು ಉಳಿಸಿ ಕೊಳ್ಳಲು ಪೀಠೋಪಕರಣ, ಸ್ಮಾರ್ಟ್ ಕ್ಲಾಸ್, ಶೌಚಾಲಯ, ಕಂಪ್ಯೂಟರ್ ಲ್ಯಾಬ್ ಇತ್ಯಾದಿಗಳನ್ನು ಒದಗಿಸಲಾಗಿದೆ