ಕುಂದಾಪುರ : ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಮತ್ತು ಗುರುಕುಲ ಪ.ಪೂ.ಕಾಲೇಜು ವಕ್ವಾಡಿ ಇವರ ಆಶ್ರಯದಲ್ಲಿ ಕುಂದಾಪುರ ತಾಲೂಕು ಮಟ್ಟದ ಪುಟ್ಬಾಲ್ ಪಂದ್ಯಾವಳಿ ಗುರುಕುಲ ಪ.ಪೂ.ಕಾಲೇಜು ಮೈದಾನದಲ್ಲಿ ಜರುಗಿತು
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗ ಆಗಮಿಸಿದ ಗುರುಕುಲ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಶ್ರೀ ಮೋಹನ್ ಕೆ ಮಾತನಾಡಿ, ನಿಮ್ಮ ಕ್ರೀಡಾ ಸ್ಪೂರ್ತಿಯನ್ನು ನೋಡಿ ತುಂಬಾ ಸಂತೋಷ ವಾಗುತ್ತಿದೆ. ಪ್ರತಿಯೋಬ್ಬರಲ್ಲಿಯೂ ವಿಶೇಷ ಗುಣವಿದೆ ತಂಡವನ್ನು ಗೆಲ್ಲಿಸುವ ಜಿದ್ದಾಜಿದ್ದಿಯ ಹೋರಾಟ ರೋಮಾಂಚನವಾಗುವ ಸಂಗತಿ ಇದು ನಿಮ್ಮ ಜೀವನದ ಉದ್ದಕ್ಕೂ ಅಳವಡಿಸಿಕೊಂಡಾಗ ಪೂರ್ಣ ಪ್ರಮಾಣದ ಯಶಸ್ಸು ನಿಮ್ಮದಾಗುತ್ತದೆ ಎಂದು ಉದಾಹರಣೆಗಳಿಂದ ಕೂಡಿದ ಅಮೂಲ್ಯ ಸಂದೇಶ ವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಯಾವ ಕೊರತೆ ಆಟಕ್ಕೆ ಅಡ್ಡಪಡಿಸಲಾರದು ಎಂದು ಇಂದಿನ ನಿಮ್ಮ ಕ್ರೀಡಾ ಸ್ಪೂರ್ತಿಯು ಮೆಚ್ಚತಕ್ಕದ್ದು ಎಂದು ಹಿರಿಯ ದೈಹಿಕ ಉಪನ್ಯಾಸಕ ನಾಗರಾಜ ಶೆಟ್ಟಿಯವರು ಹೇಳಿದರು
ಅರಿವು ಶಿಕ್ಷಣ ಸಂಸ್ಥೆಯ ಎ.ವಿ.ಪಿ ಆಗಿರುವ ರಂಜಿತ್ ಕೋಟ್ಯಾನ್ ರವರು ಮಾತನಾಡುತ್ತಾ ಮುಂಬರುವ ಆಟದಲ್ಲಿ ಗೆಲುವು ನಿಮ್ಮದಾಗಿರಲಿ ಎಂದು ವಿಜೇತ ತಂಡಕ್ಕೆ ಶುಭ ಹಾರೈಸುವುದರ ಜೊತೆಗೆ ಸೋತ ತಂಡಗಳಿಗೂ ಕೂಡ ಇಲ್ಲಿಗೆ ಮುಗಿಯಿತು ಎಂದು ಸುಮ್ಮನಿರದೆ ಜಯಕ್ಕೆ ಶ್ರಮದ ಅಗತ್ಯ ಇದೆ ಎಂದು ತಿಳಿಸಿದರು. ತಾಲೂಕು ಮಟ್ಟದ ಕ್ರೀಡಾ ಕೂಟದ ಕ್ರೀಡಾ ಸಂಚಾಲಕರು ರಾಮ ಶೆಟ್ಟಿ, ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಶ್ರೀ ಅವಿನಾಶ್ ರವರು ಉಪಸ್ಥಿತರಿದ್ದರು.
ಕುಂದಾಪುರ ತಾಲೂಕು ಪದವಿ ಪೂರ್ವ ಕಾಲೇಜು ವ್ಯಾಪ್ತಿಯ 9 ತಂಡಗಳು ಪಂದ್ಯದಲ್ಲಿ ಭಾಗವಹಿಸಿದ್ದು ಫೈನಲ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ಕುಂದಾಪುರ ತಂಡವು ಬ್ಯಾರಿಸ್ ಪ.ಪೂ.ಕಾಲೇಜು ಕೋಡಿ ತಂಡವನ್ನು ಪರಾಭವಗೊಳಿಸಿ ಜಯಶಾಲಿಯಾಗಿದ್ದು , ಎರಡು ತಂಡದಿಂದ ಆಯ್ಕೆಯಾದ ವಿದ್ಯಾರ್ಥಿಗಳ ಜೊತೆಗೆ ನಮ್ಮ ಕಾಲೇಜಿನ ವಿದ್ಯಾರ್ಥಿ ಗಿರಿಗೌಡ ಕೆ. ಪಾಟೀಲ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕರಾದ ರವಿಶಂಕರ್ ರವರು ಸ್ವಾಗತಿಸಿ ನಿರೂಪಿಸಿದರು. ಗಣಿತಶಾಸ್ತ್ರದ ಉಪನ್ಯಾಸಕಿ ಶ್ರೀಮತಿ ಶಶಿಕಲಾ ಅಮೀನ್ ರವರು ವಂದಿಸಿದರು