Home » ಗ್ರಾಮಲೆಕ್ಕಿಗರ ಮೇಲೆ ಹಲ್ಲೆ
 

ಗ್ರಾಮಲೆಕ್ಕಿಗರ ಮೇಲೆ ಹಲ್ಲೆ

by Kundapur Xpress
Spread the love

ಕುಂದಾಪುರ : ಜಿಲ್ಲಾಧಿಕಾರಿಗಳ ಆದೇಶದಂತೆ ಬೆಳೆ ಸಮೀಕ್ಷೆಗೆಂದು ತೆರಳಿದ್ದ ಗ್ರಾಮಲೆಕ್ಕಿಗ ಹಾಗೂ ಪಿ ಆರ್ ಓ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಗುರುವಾರ ಕುಂದಾಪುರದ ಜಪ್ತಿಯಲ್ಲಿ ನಡೆದಿದೆ ಹಲ್ಲೆಗೊಳಗಾದ ವಿ ಏ ಪ್ರಕಾಶ್ ಸುವರ್ಣ ಇವರು ನಿವೃತ್ತ ರಕ್ಷಣಾ ಅಧಿಕಾರಿಯಾಗಿದ್ದಾರೆ

ಗುರುವಾರ ಬೆಳಿಗ್ಗೆ ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ್ ಸುವರ್ಣ ಹಾಗೂ ಪಿ ಆರ್ ಓ ಮಧುರಾ ಬೆಳೆ ಸಮೀಕ್ಷೆಗೆ ಹೋಗಿದ್ದರು ಸರ್ವ ವೇಳೆ ಆರೋಪಿ ಶ್ರೀನಾಥ ಉಡುಪ ತನ್ನ ಸಹಚರೊಂದಿಗೆ ಜಪ್ತಿ ಗ್ರಾಮದ ಕೈಲ್‌ ಕೆರೆ ಎಂಬಲ್ಲಿ ವಿ ಎ ಯನ್ನು ನಿಂದಿಸಿ ಹಲ್ಲೆ ನಡೆಸಿದ್ದಾನೆ ಎಂದು ಪ್ರಕಾಶ್ ಸುವರ್ಣ ದೂರು ದಾಖಲಿಸಿದ್ದಾರೆ ಪ್ರಕಾಶ್ ಸುವರ್ಣ ಮತ್ತು ಮಧುರ ಇಬ್ಬರು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ್ ಶೆಟ್ಟಿ ಹಾಗೂ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಒತ್ತಾಯಿಸಿದ್ದಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

   

Related Articles

error: Content is protected !!