ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಮಹಿಳಾ ಕುಂದುಕೊರತೆ ಮತ್ತು ಪರಿಹಾರ ಕೋಶ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯೂಥ್ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ” ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿ” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇಂಗ್ಲಿಷ್ ಭಾಷಾ ತಜ್ಞ ಡಾ. ಬಿ.ಭಾಸ್ಕರ ರಾವ್ ಮಾತನಾಡಿ ಯುವಜನತೆಗೆ ಸಾಮಾಜಿಕ ಜವಾಬ್ದಾರಿಯನ್ನು ಅರಿತು ನಡೆಯಬೇಕು. ಮುಖ್ಯವಾಗಿ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ಅರಿಯಬೇಕು. ಸರಿಯಾದ ಕಾಲದಲ್ಲಿ ಸರಿಯಾದ ಶಬ್ಧಗಳನ್ನು ಬಳಸುವುದು ಮತ್ತು ಸರಿಯಾದ ಪ್ರತಿಕ್ರಿಯೆಯನ್ನು ತೋರಿಸುವುದು ಸಾಮಾಜಿಕ ಜವಾಬ್ದಾರಿಯಾಗಿದೆ. ಯುವಜನತೆ ಈ ಮೂರು ಅಂಶಗಳನ್ನು ಅರಿತು ನಡೆಯಬೇಕು. ಕೆಲವು ಸಂದರ್ಭಗಳಿಗೆ ಪೂರಕವಾಗಿ ನಮ್ಮ ಜವಾಬ್ದಾರಿಯನ್ನು ಅರಿತು ಧ್ವನಿ ಎತ್ತಿ ಮಾತನಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಸತ್ಯನಾರಾಯಣ ಉಪಸ್ಥಿತರಿದ್ದರು. ಮಹಿಳಾ ಕುಂದುಕೊರತೆ ಮತ್ತು ಪರಿಹಾರ ಕೋಶದ ಸಂಯೋಜಕರಾದ ಪ್ರೊ. ಮೀನಾಕ್ಷಿ ಎನ್.ಎಸ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಖುಷಿ ಕಾರ್ಯಕ್ರಮ ನಿರೂಪಿಸಿ, ಭೂಮಿಕಾ ಪರಿಚಯಿಸಿ, ರಶ್ಮಿ ಪ್ರಾರ್ಥಿಸಿ ಆಫ್ರಾ ವಂದಿಸಿದರು.