ಕುಂದಾಪುರ : ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಪತಿ ಮೃತಪಟ್ಟಿದ್ದು ಅವರನ್ನು ಕಾಪಾಡಲು ಹೋದ ಪತ್ನಿಗೂ ವಿದ್ಯುತ್ ಸ್ಪರ್ಶಿಸಿ ಇಬ್ಬರು ಧಾರುಣವಾಗಿ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಹೆಮ್ಮಾಡಿ ಸಮೀಪದ ಸುಳ್ಸೆ ಎಂಬಲ್ಲಿ ನಡೆದಿದೆ
ಸುಳ್ಸೆ ನಿವಾಸಿಯಾದ ಮಹಾಬಲ ದೇವಾಡಿಗ (55 ವರ್ಷ) ಹಾಗೂ ಅವರ ಪತ್ನಿ ಲಕ್ಷ್ಮಿ ದೇವಾಡಿಗ (48 ವರ್ಷ) ಮೃತಪಟ್ಟವರು
ಮಹಾಬಲ ದೇವಾಡಿಗ ಎಂಬವರು ನೆರೆಯ ಕರಣಿಕರ ಮನೆಯಲ್ಲಿ ಕೆಲಸ ಮುಗಿಸಿ ಮನೆಗೆ ವಾಪಾಸ್ಸಾಗುವ ವೇಳೆ ಈ ದುರ್ಘಟನೆ ಸಂಭವಿಸಿದೆ ದಂಪತಿ ಸಾವನ್ನಪ್ಪಿದ ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನೂರಾರು ಮಂದಿ ಆಗಮಿಸಿದರು
ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯತನವೇ ಈ ಘಟನೆಗೆ ಕಾರಣವಾಗಿದ್ದು ವಿದ್ಯುತ್ ತಂತಿಗಳ ಸಮರ್ಪಕವಾದ ಕಾರ್ಯ ನಿರ್ವಹಣೆ ಇಲ್ಲದೆ ಇದ್ದುದರಿಂದ ಈ ಘಟನೆ ಸಂಭವಿಸಿದ್ದು ಸೂಕ್ತ ಪರಿಹಾರಕ್ಕಾಗಿ ಹೆಮ್ಮಾಡಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ