ಬಜ್ಪೆ : ಗುರುಪುರ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಗ್ರಾಮದ ಪುಣೆಕೋಡಿ ಮತ್ತು ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮಣೇಲಪದವು ಎಂಬಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ಚಿನ್ನಾಭರಣ ಹಾಗೂ ಬೈಕನ್ನು ವಶಪಡಿಸಿಕೊಂಡಿದ್ದಾರೆ
ಬಜ್ಪೆ ಪೊಲೀಸರು ಪಣಂಬೂರು ಸಮೀಪದ ಕುದುರೆಮುಖ ಜಂಕ್ಷನ್ ಬಳಿಯ ಕೆ ಐ ಓ ಸಿ ಎಲ್ ಬಸ್ ನಿಲ್ದಾಣದಿಂದ ಸುರತ್ಕಲ್ ನ ಚೊಕ್ಕಬೆಟ್ಟು ನಿವಾಸಿ ತೌಸಿಫ್ ಅಹಮ್ಮದ್ (34ವರ್ಷ) ಮತ್ತು ಕಸಬಾ ಬೆಂಗ್ರೆ ನಿವಾಸಿ ಮಹಮದ್ ಪರಾಝ್ (27 ವರ್ಷ) ಎಂಬವರನ್ನು ವಶಕ್ಕೆ ಪಡೆದುಕೊಂಡು 4.5 ಲಕ್ಷ ರೂ ಮೌಲ್ಯದ ಒಟ್ಟು 75 ಗ್ರಾಂ ತೂಕದ ಚಿನ್ನಾಭರಣ ಹಾಗೂ ಕಳವು ಮಾಡಲು ಬಳಸಿದ 50,000 ಮೌಲ್ಯದ ಬೈಕ್ ವಶಪಡಿಸಿಕೊಳ್ಳಲಾಗಿದೆ
ಪುಡಿಕೋಡಿಯಲ್ಲಿ ಸಪ್ಟೆಂಬರ್ 13 ರಂದು ರಾತ್ರಿ ಸದಾಶಿವ ಪೂಜಾರಿ ಎಂಬವರ ಮನೆಯ ಬೀಗಮುರಿದ ಕಳ್ಳರು ಕಪಾಟಿನಲ್ಲಿದ್ದ 2.00 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿದ್ದರು ಸಪ್ಟೆಂಬರ್ 26 ರಂದು ಮಣೇಲಪದವಿನ ಸದಾಶಿವ ಕಾರಂತ ಎಂಬವರ ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು 2.5 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರು ಈ ಕಾರ್ಯಾಚರಣೆಯಲ್ಲಿ ಬಜ್ಪೆ ಪಿಎಸ್ಐಗಳಾದ ಗುರಪ್ಪ ಕಾಂತಿ ರೇವಣಸಿದ್ದಪ್ಪ ಕುಮಾರೇಶನ್ ಎ ಎಸ್ ಐ ರಾಮ ಪೂಜಾರಿ ಹಾಗೂ ಸಿಬ್ಬಂಧಿಗಳು ಪಾಲ್ಗೊಂಡಿದ್ದರು