Home » ದೇವರ ಅನುಗ್ರಹ
 

ದೇವರ ಅನುಗ್ರಹ

by Kundapur Xpress
Spread the love

ಆಸೆಗಳನ್ನು ತ್ಯಜಿಸುವ ಮೂಲಕ ಬದುಕನ್ನು ಭಗವಂತನೆಡೆಗೆ ಒಯ್ಯುವುದು ಸುಲಭ ಸಾಧ್ಯ ಎಂಬ ಸಂದೇಶ ಗೀತೋಪದೇಶದಲ್ಲಿದೆ. ಆಸೆಗಳನ್ನು ತ್ಯಜಿಸುವುದೆಂದರೆ ಇಹ-ಪರ ಲೋಕಗಳ ಸಕಲ ಭೋಗಗಳ ಅಪೇಕ್ಷೆಯನ್ನೂ ತ್ಯಜಿಸುವುದು ಎಂದರ್ಥ. ಐಹಿಕ ಸುಖಭೋಗಗಳೆಲ್ಲವೂ ಕ್ಷಣಭಂಗುರ ವಾದವುಗಳು ಎಂಬ ಸತ್ಯವನ್ನು ಅರಿತು ಬಾಳುವುದೇ ಪುಣ್ಯದ ಬಾಳು. ‘ನಿವೃತ್ತಿ’ಯ ಬದುಕು. ‘ಪ್ರವೃತ್ತಿಯ ಬದುಕೆಂದರೆ ಐಹಿಕ ಸುಖಭೋಗಗಳನ್ನು ಬಯಸುತ್ತಾ ಅವುಗಳಿಗೆ ಬಿಗಿಯಾಗಿ ಕಟ್ಟುಬಿದ್ದು ದಾಸನಾಗಿ ಬದುಕುವುದು. ಈ ಪ್ರವೃತ್ತಿಯ ಬದುಕು ನಮ್ಮನ್ನು ಭಗವಂತನಿಂದ ದೂರ ಮಾಡುವುದು. ಪ್ರವೃತ್ತಿಯ ಬದುಕನ್ನು ಬಾಳುವವರು ದೇವರಲ್ಲಿ ನಿತ್ಯವೂ ಐಹಿಕ ಸುಖಭೋಗಗಳನ್ನೇ ಬೇಡುವರು. ಬೇಡಿದ ವಸ್ತುಗಳು ಪ್ರಾಪ್ತವಾದೊಡನೆಯೇ ಭಗವಂತನನ್ನು ಮರೆಯುವರು ಮಾತ್ರವಲ್ಲ ತಾವು ‘ಭಕ್ತರು’ ಎಂಬ ವಿಷಯವನ್ನೂ ಮರೆತುಬಿಡುವರು. ಅದಕ್ಕೆ ಕಾರಣ  ಐಹಿಕ ಸುಖಭೋಗವನ್ನು ನೀಡುವ ವಸ್ತುಗಳೆಲ್ಲವೂ ಅನಿತ್ಯವಾದವುಗಳು; ಕ್ಷಣ ಭಂಗುರವಾದವುಗಳು. ಅವುಗಳಿಗೂ ಒಂದು ಮಿತಿ ಇದೆ. ಆ ಮಿತಿಯನ್ನು ದಾಟಿದಾಕ್ಷಣ ಅವು ನಿಷ್ಟ್ರಯೋಜಕ. ಬದುಕಿನಲ್ಲಿ ಎದುರಾಗುವ ಕಷ್ಟಗಳನ್ನು ನಿವಾರಿಸೆಂದು ಕೂಡ ದೇವರಲ್ಲಿ ಪ್ರಾರ್ಥಿಸುವುದರಿಂದ ಭಕ್ತಿಗೆ ಕಳಂಕವೇ ಉಂಟಾಗುವುದು. ಪ್ರಕೃತಿಯೆಂಬ ಮಾಯೆಗೆ ಒಳಗಾಗಿರುವ ಬದುಕು ದುಃಖಮಯವಲ್ಲದೆ ಬೇರೇನೂ ಆಗಿರುವಂತಿಲ್ಲ. ಅಂತೆಯೇ ಮಿಥ್ಯಾಬದುಕಿನ ಸಂಕಷ್ಟ, ಗೋಜಲು, ಗೊಂದಲ, ದುಃಖಗಳನ್ನು ಛಲದಿಂದ ಎದುರಿಸಿ, ಅನುಭವಿಸುವ, ಗೆಲ್ಲುವ ಮೂಲಕವೇ ದಾಟುವ ಸಂಕಲ್ಪ ನಮ್ಮದಾಗಬೇಕು. ಅದಕ್ಕೆ ದೇವರ ಅನುಗ್ರಹ ಪ್ರಾಪ್ತವಾಗುವುದರಲ್ಲಿ ಬೇಡ. ಬದುಕನ್ನು ಕಾಣುವ ನಮ್ಮ ಅಂತರ್ ದೃಷ್ಟಿಯಲ್ಲಿ ಮೂಲಭೂತ ಬದಲಾವಣೆಯಾಗದೆ ಐಹಿಕ ಜಗತ್ತಿನ ಆಕರ್ಷಣೆಯಿಂದ ಮನಸ್ಸು ಹೊರಬಾರದು. ಭವಸಾಗರವನ್ನು ದಾಟುವ ಸಂಕಲ್ಪ ನಮ್ಮದಾಗಬೇಕು. ಅದಕ್ಕೆ ದೇವರ ಅನುಗ್ರಹ ಪ್ರಾಪ್ತವಗುವುದರಲ್ಲಿ ಸಂದೇಹವೇ ಬೇಡ. ಬದುಕನ್ನು ಕಾಣುವ ನಮ್ಮ ಅಂತರ್ ದೃಷ್ಟಿಯಲ್ಲಿ ಮೂಲಭೂತ ಬದಲಾವಣೆಯಾಗದೆ ಐಹಿಕ ಜಗತ್ತಿನ ಆಕರ್ಷಣೆಯಿಂದ ಮನಸ್ಸು ಹೊರಬಾರದು.

   

Related Articles

error: Content is protected !!