Home » “ನಮ್‌ ಕುಂದಾಪ್ರ- ಸ್ವಚ್ಛ ಕುಂದಾಪ್ರ ೨.೦”
 

“ನಮ್‌ ಕುಂದಾಪ್ರ- ಸ್ವಚ್ಛ ಕುಂದಾಪ್ರ ೨.೦”

by Kundapur Xpress
Spread the love

ಕುಂದಾಪುರ: ಅಕ್ಟೋಬರ್‌ ೨ ರಂದು  ಇಲ್ಲಿನ  ಭಂಡಾರ್ಕಾರ್ಸ್‌  ಆರ್ಟ್ಸ್‌ ಮತ್ತು ಸಾಯನ್ಸ ಕಾಲೇಜು , ಶ್ರೀ ಕುಂದೇಶ್ವರ ದೇವಸ್ಥಾನ, ಆರೋಗ್ಯ ಇಲಾಖೆ,  ಪುರಸಭೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸ್ಥಳೀಯ ಸೇವಾ ಸಂಸ್ಥೆಗಳ ಸಹಯೋಗದಲ್ಲಿ  ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆಯ  ಪ್ರಯುಕ್ತ  ನಡೆದ ಕಾಯಕ್ರಮ “ನಮ್‌ ಕುಂದಾಪ್ರ- ಸ್ವಚ್ಛ ಕುಂದಾಪ್ರ ೨.೦” ಬ್ರಹತ್‌ ಸ್ವಚ್ಛತಾ ಅಭಿಯಾನ ಮತ್ತು ಜನಜಾಗೃತಿ ಕಾಯಕ್ರಮವನ್ನು ಕುಂದಾಪುರದ ಸಹಾಯಕ ಆಯುಕ್ತೆ ರಶ್ಮಿ ಎಸ್. ಆರ್‌. ಅವರು ಉದ್ಯಾಟಿಸಿದರು.

ಕಾರ್ಯಕ್ರವನ್ನು ಉದ್ದೇಶಿಸಿ  ಮಾತನಾಡಿದ ಅವರು  ಈ ಸ್ವಚ್ಛತಾ ಅಭಿಯಾನವು  ಉತ್ತಮ ಕಾರ್ಯಕ್ರಮವಾಗಿದೆ. ಇದು ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅರಿಯುವ ಕಾಯಕ್ರಮವಾಗಿದೆ.  ಯಾವುದೇ ಕೆಲಸ ನಿರ್ವಹಣೆಯಲ್ಲಿ  ದೂರದೃಷ್ಟಿ ಇರಬೇಕು. ಯಾಕೆಂದರೆ ನಾವು ಎಸೆಯುವ ಒಂದು ಪ್ಲಾಸ್ಟಿಕ್‌  ಸ್ಟ್ರಾ ಕೂಡ ಬಹುಕಾಲ ಉಳಿಯುವ   ಆಮೆಯಂತಹ ಜೀವಿಯ ಜೀವವನ್ನೆ ತೆಗೆಯಬಹುದು.  ಹಾಗಾಗಿ  ಪ್ರಜ್ಞಾವಂತರಾದ ನಾವು ಜಾಗೃತರಾಗಿ ನಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಅವರು ಗಾಂಧೀಜಿ ತಾಳ್ಮೆಯ ಪ್ರತೀಕ. ನಾವು ಯಾವುದೇ ಕೆಲಸ ನಿರ್ವಹಿಸುವಾಗಿ ತಾಳ್ಮೆಯಿಂದ ಕೆಲಸ ನಿರ್ವಹಿಸಬೇಕು. ತಪ್ಪುದಾಗ ಅದನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕು. ಹೊಸತನದ ಕಡೆಗೆ ಹೆಜ್ಜೆ ಹಾಕಬೇಕು. ಅಲ್ಲದೇ  ಶಾಸ್ತ್ರೀಜಿಯವರ ಆರ್ಥಿಕತೆಯ ಕುರಿತ ದೂರದೃಷ್ಟಿ ಹೆಚ್ಚು ಅರ್ಥಪೂರ್ಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ  ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಮಂಜುನಾಥ, ತಾಲೂಕು ಆರೋಗ್ಯಾಧಿಕಾರಿ ಡಾ.ಶೋಭಾ, ಸಮಾಜಸೇವಕ ದತ್ತಾನಂದ ಗಂಗೊಳ್ಳಿ, ಭಂಡಾರ್ಕಾರ್ಸ್‌ ಕಾಲೇಜಿನ  ವಿಶ್ವಸ್ಥ ಮಂಡಳಿಯ ಸದಸ್ಯರಾದ ಸದಾನಂದ ಚಾತ್ರ, ಯು.ಎಸ್.ಶೆಣೈ, ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ಭಂಡಾರ್ಕಾರ್ಸ್‌ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ, ಕಾಲೇಜಿನಲ್ಲಿ  ೧೯೭೩ನೇ ಸಾಲಿನಲ್ಲಿ ಅಧ್ಯಯನ ಮಾಡಿದ  ವಿದ್ಯಾರ್ಥಿಗಳು , ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

   

Related Articles

error: Content is protected !!