ಮಂಗಳೂರು : ಮಂಗಳೂರು ನಗರದ ಕದ್ರಿ ಕಂಬಳದಲ್ಲಿರುವ ತಮ್ಮ ಒಂದೇ ನಿವಾಸದಲ್ಲಿ ಇಬ್ಬರು ವೃಧ್ಧೆಯರು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮಂಗಳವಾರ ನಡೆದಿದೆ ಮೃತರನ್ನು 70 ವರ್ಷ ವಯಸ್ಸಿನ ಲತಾ ಭಂಡಾರಿ ಮತ್ತು ಅವರ ಸಹೋದರಿ 80 ವರ್ಷದ ಸುಂದರಿ ಶೆಟ್ಟಿ ಎಂದು ತಿಳಿದು ಬಂದಿದೆ
ಲತಾ ಭಂಡಾರಿಯವರ ಪತಿ ಮಂಜುನಾಥ ಭಂಡಾರಿ ಎಂದಿನಂತೆ ಬಾರ್ಗೆ ಕೆಲಸಕ್ಕೆ ಹೋಗಿದ್ದರು ಅವರು ಸಂಜೆ 4:30 ಕ್ಕೆ ಮನೆಗೆ ಹಿಂತಿರುಗಿದಾಗ ಬಾಗಿಲು ಬಂದಾಗಿದ್ದು ಕಿಟಿಕಿಯಿಂದ ನೋಡಿದಾಗ ತಮ್ಮ ಪತ್ನಿ ಮತ್ತು ಅತ್ತಿಗೆ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಕೌಟುಂಬಿಕ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ