ಕಾಪು : ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಅಲೆವೂರು ಪ್ರಗತಿ ನಗರಕ್ಕೆ ಭೇಟಿ ನೀಡಿ ಜನರ ಕುಂದು ಕೊರತೆ ಆಲಿಸಿ ಅಹವಾಲು ಸ್ವೀಕರಿಸಿದರು ರಸ್ತೆ ನಿರ್ಮಾಣ ಹಾಗೂ ನಿವೇಶನ, ಹಕ್ಕುಪತ್ರ ಸಮಸ್ಯೆ ಬಗ್ಗೆ ಸ್ಥಳೀಯರು ಶಾಸಕರಿಗೆ ಅಹವಾಲು ನೀಡಿದ್ದು ಈ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಪರಿಹರಿಸುವುದಾಗಿ ಶಾಸಕರು ತಿಳಿಸಿದರು
ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಅಲೆವೂರು ಗ್ರಾಮ ಪಂಚಾಯತ್ ಸದಸ್ಯರಾದ ಶೇಖರ ಆಚಾರ್ಯ, ಅವಿನಾಶ್ ಶೆಟ್ಟಿಗಾರ್, ಆಶೀಶ್, ಅಕ್ಷಯ ಎಂಟರ್ಪ್ರೈಸಸ್ ಅರವಿಂದ ನಾಯಕ್, ಬೂತ್ ಅಧ್ಯಕ್ಷರಾದ ಮಂಜು ಉಪಸ್ಥಿತರಿದ್ದರು