ಕುಂದಾಪುರ : ತಲ್ಲೂರು ಚಿಕ್ಕುಮನೆ ನಿವಾಸಿಯಾದ ಶೇಖರ್ ಪೂಜಾರಿಯವರು ನಿನ್ನೆ ಮಣಿಪಾಲದಲ್ಲಿ ನಿಧನ ಹೊಂದಿದರು ಅವರಿಗೆ 57 ವರ್ಷ ವಯಸ್ಸಾಗಿತ್ತು
ಕಳೆದ 10 ವರ್ಷಗಳಿಂದ ತಲ್ಲೂರು ರಿಕ್ಷಾ ಚಾಲಕರು ಹಾಗೂ ಮಾಲಕರ ಸಂಘದ ಅಧ್ಯಕ್ಷರಾಗಿದ್ದ ಅವರು ಹಲವು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರೀಯರಾಗಿದ್ದರು ತಲ್ಲೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾದ ಇವರು ವಂಡ್ಸೆ ಬ್ಲಾಕ್ ಕಾಂಗ್ರೇಸ್ ನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು ಇವರು ಹಲವು ದಶಕಗಳಿಂದ ತಲ್ಲೂರು ಪರಿಸರದ ಜನರ ಕಷ್ಟ ಕಾರ್ಪಣ್ಯಗಳಿಗೆ ತಕ್ಷಣ ಸ್ಪಂದಿಸುತ್ತಿದ್ದು ಪರಿಸರದಲ್ಲಿ ಅಪಘಾತಗಳು ಸಂಭವಿಸದಾಗ ಇವರೇ ಖುದ್ದಾಗಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದರು
ಶೇಖರ್ ಪೂಜಾರಿಯವರಿಗೆ ಶುಕ್ರವಾರ ಸಂಜೆಯ ವೇಳೆಗೆ ಲಘು ಹೃದಯಾಘಾತವಾಗಿದ್ದು ಅವರಿಗೆ ಕುಂದಾಪುರದಲ್ಲಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ಮಣಿಪಾಲದ ಕೆ ಎಂ ಸಿ ಗೆ ದಾಖಲಿಸಲಾಗಿತ್ತು ಆಸ್ಪತ್ರೆಯಲ್ಲಿ ಅವರಿಗೆ ಸ್ಟಂಟ್ ಅಳವಡಿಸಿದ ಕೆಲವೇ ಘಂಟೆಗಳಲ್ಲಿ ವರು ನಿಧನ ಹೊಂದಿದರು
ತಲ್ಲೂರು ಸಂಪೂರ್ಣ ಬಂದ್ : ಶೇಖರ್ ಪೂಜಾರಿಯವರ ನಿಧನಕ್ಕೆ ಹೆಮ್ಮಾಡಿ ತಲ್ಲೂರು ಹಾಗೂ ಕುಂದಾಪುರದ ಜನತೆ ಕಂಬನಿ ಮಿಡಿದಿದ್ದಾರೆ ತಲ್ಲೂರು ಪೇಟೆಯ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿತ್ತು ಅವರ ಅಂತಿಮ ಯಾತ್ರೆಯು ಮೆರವಣಿಗೆಯ ಮೂಲಕ ಕುಂದಾಪುರದ ಮುಖ್ಯ ರಸ್ತೆಯಲ್ಲಿ ಸಾಗಿ ಜನತೆ ವಿದಾಯ ಹೇಳಿದರು ಬೈಂದೂರಿನ ಮಾಜಿ ಶಾಸಕ ಗೋಪಾಲ ಪೂಜಾರಿ ಮಾಜಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರು ಅಂತಿಮ ದರ್ಶನ ಪಡೆದು ಸಂತಾಪ ವ್ಯಕ್ತಪಡಿಸಿದ್ದಾರೆ
ಮೃತರು ಪತ್ನಿ ಹಾಗೂ ಇಬ್ಬರು ಪುತ್ತಿಯರನ್ನು ಅಗಲಿದ್ದಾರೆ