Home » ವಿದ್ಯಾರ್ಥಿಗಳ ಜೀವನದ ಯಶೋರಹಸ್ಯ
 

ವಿದ್ಯಾರ್ಥಿಗಳ ಜೀವನದ ಯಶೋರಹಸ್ಯ

ಭಂಡಾರ್ಕಾರ್ಸ್ ಕಾಲೇಜು

by Kundapur Xpress
Spread the love

ಕುಂದಾಪುರ :  ಅಕ್ಟೋಬರ್ 11ರಂದು ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ  ಸಂಸ್ಕೃತ ಸಂಘ, ಲಲಿತ ಕಲಾ ಸಂಘ, ಭಾರತೀಯ ರೆಡ್ ಕ್ರಾಸ್ ಘಟಕ, , ಕನ್ನಡ ಸಾಹಿತ್ಯ ವೇದಿಕೆ ಹಾಗೂ ಐಕ್ಯೂಎಸಿ ಇವರ ಸಹಯೋಗದಲ್ಲಿ ‘ ಯಕ್ಷಗಾನ ಮತ್ತು ಸಾಹಿತ್ಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಜೀವನದ ಯಶೋರಹಸ್ಯ ‘ ಎನ್ನುವ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ನಿವೃತ್ತ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ  ವಿ.ಎನ್. ಪುರಾಣಿಕ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿ ಅವರು ” ಸಮಯ ಎನ್ನುವುದು ಎಲ್ಲರಿಗೂ ಸಮಾನವಾಗಿ ಹಂಚಲ್ಪಟ್ಟಿದೆ, ಆದ್ದರಿಂದ ಪ್ರತಿಯೊಬ್ಬರಿಗೂ ಸಮಯಪ್ರಜ್ಞೆ ಇರಬೇಕು, ಸಮಯ ತುಂಬಾ ಅಮೂಲ್ಯವಾದದ್ದು ” ಎಂದರು. ಹಾಗೆಯೇ ವಿದ್ಯಾರ್ಥಿಗಳಿಗೆ ಸತತ ಪ್ರಯತ್ನ, ಶ್ರದ್ದೆ, ತಾಳ್ಮೆ ಇರಬೇಕೆಂದು ಹೇಳಿದರು. ಹೀಗೆ ಜೀವನಕ್ಕೆ ಬೇಕಾದ ಅಮೂಲ್ಯ ಮಾಹಿತಿ ಮತ್ತು ಸಲಹೆಗಳನ್ನು ನೀಡುವುದರ ಜೊತೆಗೆ ಯಕ್ಷಗಾನ ಮತ್ತು ಸಾಹಿತ್ಯದ ಪ್ರಾಮುಖ್ಯತೆಯನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಡಾ. ಶುಭಕರಾಚಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿಗಳು ಹಾಗೂ ರೆಡ್ ಕ್ರಾಸ್ ಸಂಯೋಜಕರಾದ ಪ್ರೊ. ಸತ್ಯನಾರಾಯಣ್ ಹತ್ವಾರ್, ಐಕ್ಯೂಎಸಿ ಸಂಯೋಜಕರಾದ ಡಾ. ವಿಜಯ್ ಕುಮಾರ್ ಕೆ.ಎಂ, ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ಯಶವಂತಿ ಕೆ, ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಮೈತ್ರಿಯವರು ಮತ್ತು ಲಲಿತ ಕಲಾ ಸಂಘದ ಸಂಯೋಜಕರಾದ ಪ್ರೊ. ಶಶಾಂಕ್ ಪಟೇಲ್ ರವರು ಉಪಸ್ಥಿತರಿದ್ದರು.

 

   

Related Articles

error: Content is protected !!