Home » ರಚನಾತ್ಮಕ ಬುಧ್ಧಿಮತ್ತೆ ಇಂದಿನ ಅಗತ್ಯ
 

ರಚನಾತ್ಮಕ ಬುಧ್ಧಿಮತ್ತೆ ಇಂದಿನ ಅಗತ್ಯ

– ಕಿರಣ್ ಕುಮಾರ್ ಕೊಡ್ಗಿ

by Kundapur Xpress
Spread the love

ಕುಂದಾಪುರ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಂಕ ಗಳಿಕೆಯೊಂದೇ ವಿದ್ಯಾಭ್ಯಾಸವಲ್ಲ. ವಿದ್ಯಾರ್ಥಿ ಜೀವನದಲ್ಲಿ ಅನೇಕ ಸಾಧ್ಯತೆ ಮತ್ತು ಅವಕಾಶಗಳಿವೆ. ವಿದ್ಯೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ರಚನಾತ್ಮಕ ಬುದ್ಧಿಮತ್ತೆ ಇಂದಿನ ಅಗತ್ಯವಾಗಿದ್ದು ಯಶಸ್ವಿ ವ್ಯಕ್ತಿಯ ಇತಿಹಾಸ ಮತ್ತು ಪರಿಶ್ರಮವನ್ನು ಅರ್ಥ ಮಾಡಿಕೊಂಡು ಸ್ಫೂರ್ತಿ ಪಡೆದು ತಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಇದಕ್ಕೆ ವಿದ್ಯಾರ್ಥಿ ವೇದಿಕೆ ದಾರಿದೀಪವಾಗಲಿ ಎಂದು ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕೋಟೇಶ್ವರ ಇದರ ಬಿ.ಸಿ.ಎ. ಪದವಿ ಮತ್ತು ವಿದ್ಯಾರ್ಥಿ ವೇದಿಕೆಯನ್ನು ಉದ್ಘಾಟಿಸಿದ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿಯವರು ಮಾತನಾಡಿದರು

ಕುಂದಾಪುರ ಪೋರ್ಟ್‍ ಗೇಟ್ ಎಜುಕೇಶನ್ ಟ್ರಸ್ಟ್ ಇದರ ಅಧ್ಯಕ್ಷರಾದ ಅಭಿನಂದನ ಎ. ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಕನ್ನಡದೊಂದಿಗೆ ಸಂವಹನ ಕಲೆಯಾಗಿ ಆಂಗ್ಲಭಾಷೆಯನ್ನು ಕೂಡ ಕರಗತ ಮಾಡಿಕೊಂಡು ಮುಂದಿನ ಬದುಕಿಗೆ ಅಗತ್ಯವಾದ ಜೀವನ ಕೌಶಲ್ಯವನ್ನು ರೂಢಿಸಿಕೊಂಡು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ವಿದ್ಯಾರ್ಥಿ ದೆಸೆಯಲ್ಲಿಯೇ ಪರಿಶ್ರಮವನ್ನು ಪಡಬೇಕು. ಸೋಲನ್ನು ಗೆಲುವನ್ನಾಗಿ ಪರಿವರ್ತಿಸಿಕೊಂಡು ಯಶಸ್ವಿ ಜೀವನವನ್ನು ಕಾಣಬೇಕೆಂದು ತಿಳಿ ಹೇಳಿದರು. 

ವೇದಿಕೆಯಲ್ಲಿ ಶ್ರೀ ಜೆ.ಪಿ. ಶೆಟ್ಟಿ ಕಟ್ಕೆರೆ, ಶ್ರೀ ಸುಧೀರ ಕುಮಾರ ಶೆಟ್ಟಿ ಮಾರ್ಕೋಡು ಹಾಗೂ ಐಕ್ಯೂಎಸಿ ಸಂಚಾಲಕರಾದ ಶ್ರೀ ನಾಗರಾಜ ಯು ಉಪಸ್ಥಿತರಿದ್ದು ಶುಭ ಹಾರೈಸಿದರು.

   

Related Articles

error: Content is protected !!