Home » ಜಿಲ್ಲೆಯಲ್ಲಿ ನಿಷೇಧಾಜ್ಙೆ ಜಾರಿ
 

ಜಿಲ್ಲೆಯಲ್ಲಿ ನಿಷೇಧಾಜ್ಙೆ ಜಾರಿ

by Kundapur Xpress
Spread the love

ಉಡುಪಿ : ಅಕ್ಟೋಬರ್ 14 ರ ಬೆಳಿಗ್ಗೆ 6.00 ಗಂಟೆಯಿಂದ ಅಕ್ಟೋಬರ್ 15 ರ ಸಂಜೆ 6.00 ಗಂಟೆಯವರೆಗೆ ಉಡುಪಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿಗಳಾದ ಡಾ.ಕೆ ವಿದ್ಯಾಕುಮಾರಿಯವರು ಆದೇಶ ಹೊರಡಿಸಿದ್ದಾರೆ

ಉಡುಪಿ ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ಹಾಗೂ ಮಹಿಷ ದಸರಾ ಆಚರಣೆ ಪರ ಮತ್ತು ವಿರೋಧ ಪೋಸ್ಟರ್ ಬ್ಯಾನರ್ ಬಂಟಿಂಗ್ ಅಳವಡಿಸುವುದಕ್ಕೆ ಹಾಗೂ ಪ್ರತಿಭಟನೆ ಹಾಗೂ ಮೆರವಣಿಗೆಯನ್ನು ನಡೆಸುವುದನ್ನು ನಿಷೇಧಿಸಿ ಈ ಆದೇಶ ಹೊರಡಿಸಲಾಗಿದೆ ಈ ವೇಳೆ ಘೋಷಣೆ ಕೂಗುವುದು ಭಾಷಣ ಮಾಡುವುದು ಗಾಯನ ಮೂಲಕ ಪ್ರಚೋದಿಸುವುದು ಹಾಗೂ ಬಿತ್ತಿ ಪತ್ರ ಅಂಟಿಸುವಂತಿಲ್ಲ ಹಾಗೂ ಪಟಾಕಿ ಸಿಡಿಸುವಂತಿಲ್ಲ ಎಂದು ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

   

Related Articles

error: Content is protected !!