ಕುಂದಾಪುರ : ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆ ಅಡಿಯಲ್ಲಿ ಚಪ್ಪಲಿ ಅಂಗಡಿಗೆ ಸಾಲ ಪಡೆದು ಯಶಸ್ಸು ಕಂಡ ಕುಂದಾಪುರ ನಗರದ ಬಹದ್ದೂರ್ ರಸ್ತೆಯ ನಿವಾಸಿಯಾದ ಮಣಿಕಂಠ ಎಂಬವರಿಗೆ ಕೇಂದ್ರ ಸರಕಾರದಿಂದ ಗೌರವ ದೊರೆತಿದ್ದು ಅವರನ್ನು ಮುಂದಿನ ವರ್ಷ ಜನವರಿ 26 ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಕೇಂದ್ರ ಸರ್ಕಾರ ಆಹ್ವಾನ ನೀಡಿದೆ
ಮಣಿಕಂಠ ಎಂಬವರು ಕುಂದಾಪುರದ ನಗರದ ಶಾಸ್ತ್ರೀಪಾರ್ಕ್ ಸಮೀಪದಲ್ಲಿ ಪಾದರಕ್ಷೆ ಹಾಗೂ ಕೊಡೆಗಳನ್ನು ರಿಪೇರಿ ಮಾಡುವ ಪೆಟ್ಟಿಗೆ ಅಂಗಡಿಯನ್ನು ನಡೆಸುತ್ತಿದ್ದಾರೆ ಎರಡು ವರ್ಷಗಳ ಹಿಂದೆ ಕೌಶಲ್ಯ ಅಭಿವೃದ್ಧಿ ಇಲಾಖೆ ವತಿಯಿಂದ ಕುಂದಾಪುರ ಪುರಸಭೆ ಮೂಲಕ ಅವರಿಗೆ ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆ ಅಡಿ 10,000 ಸಾಲ ಶೇಕಡ 7 ರ ಬಡ್ಡಿ ದರದಲ್ಲಿ ನೀಡಿತು ಈ ಸಾಲ ಮರುಪಾವತಿಗೆ 12 ತಿಂಗಳು ಅವಧಿ ಇದ್ದರೂ ಮಣಿಕಂಠವರು ಅದನ್ನು ಐದೇ ತಿಂಗಳಲ್ಲಿ ಕಟ್ಟಿದ್ದರು ಸಮಯಕ್ಕೆ ಸರಿಯಾಗಿ ಸಾಲ ಕಟ್ಟಿದ್ದನ್ನು ಮೆಚ್ಚಿ ಇಲಾಖೆ ಅವರಿಗೆ 20 ಸಾವಿರ ಸಾಲವನ್ನು ನೀಡಿತ್ತು ಅದರಿಂದ ಮಳೆಗಾಲದಲ್ಲಿ ಬೇಕಾಗುವ ಚಪ್ಪಲಿ ಮತ್ತು ಕೊಡೆಗಳನ್ನು ತಂದು ಮಾರಾಟ ಮಾಡಿ ಯಶಸ್ವಿಯಾದರು ಲಾಭವನ್ನು ಗಳಿಸಿ ನಿಗದಿತ ಅವದಿಯೊಳಗೆ ಮರುಪಾವತಿಸಿದ್ದು ಅವರ ಪ್ರಾಮಾಣಿಕತೆಗಾಗಿ ಇಲಾಖೆ ಮತ್ತೆ 50 ಸಾವಿರ ಸಾಲವನ್ನು ಮಂಜೂರು ಮಾಡಿದೆ ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆಯಲ್ಲಿ ಯಶಸ್ಸುಕಂಡ ಅವರನ್ನು ಈ ಬಾರಿಯ ಗಣರಾಜ್ಯೋತ್ಸವಕ್ಕೆ ಕೇಂದ್ರ ಸರಕಾರ ಅವರನ್ನು ಆಹ್ವಾನಿಸಿದೆ