ಕುಂದಾಪುರ : ಕುಂದಾಪುರ ಅರಣ್ಯ ಇಲಾಖೆಯ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕನ ಮೇಲೆ ನಾಲ್ವರು ಹಲ್ಲೆ ನಡೆಸಿದ ಘಟನೆ ಕುಂದಾಪುರದ ವಲಯ ಅರಣ್ಯ ಅಧಿಕಾರಿಗಳ ಕಚೇರಿಯ ಆವರಣದಲ್ಲಿ ನಿನ್ನೆ ಸಂಜೆ ನಡೆದಿದೆ
ಕುಂದಾಪುರ ನಗರದ ಕುಂದೇಶ್ವರ ಬಳಿಯ ನಿವಾಸಿಯಾದ ಅಶೋಕ್ (38 ವರ್ಷ) ಹಲ್ಲೆಗೀಡಾದ ಅರಣ್ಯ ಇಲಾಖೆಯ ಚಾಲಕ ಬುಧವಾರ ಸಂಜೆ ವೇಳೆಗೆ ವಲಯ ಅರಣ್ಯ ಅಧಿಕಾರಿಗಳ ಕಚೇರಿಯ ಆವರಣದೊಳಗೆ ಬಂದ ಆರೋಪಿಗಳಾದ ಇಮ್ತಿಯಾಜ್ ವಿನೋದ್ ಹಾಗೂ ಮತ್ತಿಬ್ಬರು ಆರೋಪಿಗಳು ಅಶೋಕ್ ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ ಎರಡು ದಿನಗಳ ಹಿಂದೆ ಅರಣ್ಯ ಇಲಾಖೆಯ ಅಧಿಕಾರಿಗಳು ಅಕ್ರಮ ಮರ ಸಾಗಾಟದ ಲಾರಿಯನ್ನು ವಶಕ್ಕೆ ಪಡೆದು ಪ್ರಕರಣವನ್ನು ದಾಖಲಿಸಿದ್ದರು ಈ ಮಾಹಿತಿಯನ್ನು ಇಲಾಖೆಗೆ ಚಾಲಕ ಅಶೋಕ್ ನೀಡಿದ್ದ ಎಂದು ಆರೋಪಿಗಳು ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ
ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಾಯಾಳು ಅಶೋಕ್ ಚಿಕಿತ್ಸೆ ಪಡೆಯುತ್ತಿದ್ದಾರೆ ಆಸ್ಪತ್ರೆಗೆ ಕುಂದಾಪುರ ವಲಯ ಅರಣ್ಯಾಧಿಕಾರಿ ಟಿ ಕಿರಣ್ ಬಾಬು ಉಪವಲಯ ಅರಣ್ಯ ಅಧಿಕಾರಿಗಳಾದ ಬಿ ಉದಯ್ ಗುರುರಾಜ್ ಸುನಿಲ್ ಶರತ್ ಪ್ರಥಮ ದರ್ಜೆ ಸಹಾಯಕ ಸತೀಶ್ ಕಚೇರಿ ಸಿಬ್ಬಂದಿಗಳಾದ ಅಣ್ಣಪ್ಪ ಗಸ್ತು ಅರಣ್ಯ ಪಾಲಕರಾದ ಆನಂದ ಬಳೆಗಾರ ವಿಜಯಕುಮಾರ್ ಅರಣ್ಯ ವೀಕ್ಷಕರ ಸೋಮಶೇಖರ್ ಭೇಟಿ ನೀಡಿದ್ದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ