Home » ಸೃಷ್ಟಿಯ ವೈವಿಧ್ಯ
 

ಸೃಷ್ಟಿಯ ವೈವಿಧ್ಯ

by Kundapur Xpress
Spread the love

ಸೃಷ್ಟಿಯ ವೈವಿಧ್ಯ ನಿಜಕ್ಕೂ ಬೆರಗುಗೊಳಿಸುವಂತಹದ್ದು. ಅದರ ಆಕರ್ಷಣೆ ಅನನ್ಯವಾದದ್ದು. ಬೆಡಗು ಅನುಪಮವಾದದ್ದು. ಆದುದರಿಂದಲೇ ನಾವು ಪ್ರಕೃತಿಯ ಸಮ್ಮೋಹಕ್ಕೆ ಒಳಗಾಗುವುದು. ಈ ಜಗತ್ತನ್ನು ನಾವುಸೃಷ್ಟಿಯ ವೈವಿಧ್ಯ ಇಷ್ಠೊಂದು ಪ್ರೀತಿಸುವುದೇ ಆ ಸಮ್ಮೋಹದ ಪ್ರಭಾವದಲ್ಲಿ, ಆ ಸಮ್ಮೋಹವು ನಮ್ಮಲ್ಲಿ ಭ್ರಾಂತಿಯನ್ನು ಉಂಟು ಮಾಡುವುದು. ಐಹಿಕ ಜಗತ್ತಿನ ಸಕಲ ಸುಖಭೋಗಗಳು ನಿಜವಾದವುಗಳು ಎಂಬ ಭ್ರಾಂತಿ ಯಲ್ಲಿ ಅವನ್ನು ನಾವು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವೆವು. ಅನಿತ್ಯವಾದ ಸುಖ ಭೋಗಗಳನ್ನು ಅನುಭವಿಸಿದಷ್ಟೂ ತೃಪ್ತಿ ಸಿಗದು. ಅದಕ್ಕಿಂತಲೂ ಮಿಗಿಲಾದ ಸುಖ ಇನ್ನೇನೋ ಇದೆ ಎಂದು ಅದಕ್ಕಾಗಿ ಪರಿತಪಿಸುವೆವು. ಇನ್ನೂ ಆ ಸುಖ ದೊರಕಿಲ್ಲವಲ್ಲ ಎಂದು ದುಃಖಿಸುವೆವು. ಸೃಷ್ಟಿಯ ವೈವಿಧ್ಯದ ಪರಿತಾಪಕ್ಕೆ ಸಿಲುಕಿ ನಿರಂತರ ದುಃಖಿಗಳಾಗುವೆವು. ಹೊರಗಣ್ಣಿಗೆ ಗೋಚರವಾಗುವ ಸೃಷ್ಟಿಯ ವೈವಿಧ್ಯದ ಆಳದಲ್ಲೆಲ್ಲೋ ಏಕತೆ ಅಡಗಿರುವುದು ನಮ್ಮ ಊಹೆಗೂ ನಿಲುಕದು. ಅಷ್ಟೊಂದು ಭ್ರಾಂತಿ ಉಂಟುಮಾಡಬಲ್ಲ ಆಕರ್ಷಣೆ ಪ್ರಕೃತಿಯ ಬಾಹ್ಯ ಸ್ವರೂಪದಲ್ಲಿದೆ. ಬೆಂಕಿಯ ಕೊಳ್ಳಿಯನ್ನು ವೇಗವಾಗಿ ತಿರುಗಿಸಿದರೆ ನಮಗೆ ಆ ಕೊಳ್ಳಿಯು ತನ್ನ ಮೂಲ ಸ್ವರೂಪದಲ್ಲಿ ಕಾಣಿಸದು. ತಿರುಗುವ ವೇಗಕ್ಕೆ ಆ ಕೊಳ್ಳಿಯು ಬೆಂಕಿಯ ಒಂದು ವೃತ್ತವಾಗಿಯೇ ಕಾಣಿಸುವುದು. ಬೆಂಕಿಯ ಕೊಳ್ಳಿ ಒಂದೇ ಆದರೆ ಅದು ತಿರುಗುವಿಕೆಯ ವೇಗದಲ್ಲಿ ಪಡೆದುಕೊಳ್ಳುವ ಆಕೃತಿ ಬೇರೆಯೇ ! ಆತ್ಮನ ಮುಂದೆ ಪ್ರಕಟವಾಗುವ ತೋರಿಕೆಯ ಜಗತ್ತು ಕೂಡ ಹೀಗೆಯೇ. ಅಂತೆಯೇ ಸೃಷ್ಟಿಯ ಈ ಭ್ರಾಮಕ ವೈವಿಧ್ಯ ನಮ್ಮ ಮೇಲೆ ಉಂಟುಮಾಡುವ ಪ್ರಭಾವ ಅಸದೃಶವಾದದ್ದು. ಜನನ-ಮರಣಗಳನ್ನು ಗೆಲ್ಲಲು ಸೃಷ್ಟಿಯ ಈ ವೈವಿಧ್ಯದ ಪ್ರಭಾವದಿಂದ ಪಾರಾಗುವುದು ಅನಿವಾರ್ಯ ಎನ್ನುತ್ತದೆ ವಿವೇಕವಾಣಿ

   

Related Articles

error: Content is protected !!