Home » ಆತ್ಮಜ್ಞಾನದ ಬೆಳಕು
 

ಆತ್ಮಜ್ಞಾನದ ಬೆಳಕು

by Kundapur Xpress
Spread the love

ಐಹಿಕ ಪ್ರಪಂಚದ ಎಲ್ಲ ಬಗೆಯ ಸಂಪತ್ತುಗಳಿಗಿಂತ ಅತೀ ಶ್ರೇಷ್ಠವಾದುದು ಜ್ಞಾನ ಸಂಪತ್ತು, ಜ್ಞಾನಕ್ಕೆ ಸರಿಸಮಾನವಾದುದು ಈ ಪ್ರಪಂಚದಲ್ಲಿ ಯಾವುದೂ ಇಲ್ಲ ಎಂದು ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳುತ್ತಾನೆ. ಆದರೆ ಈ ಜ್ಞಾನವು ಯಾವುದು ? ಐಹಿಕ ಸುಖಭೋಗಗಳು, ಅಧಿಕಾರ, ಅಂತಸ್ತು ಇತ್ಯಾದಿಗಳನ್ನು ವಶಮಾಡಿಕೊಳ್ಳಲು ನಾವು ಪಡೆಯಬಹುದಾದ ಯಾವತ್ತೂ ಜ್ಞಾನ ನಿಜವಾದ ಅರ್ಥದಲ್ಲಿ ಜ್ಞಾನವೇ ಅಲ್ಲ. ಆಧ್ಯಾತ್ಮಿಕ ದೃಷ್ಟಿಯಲ್ಲಿ ವಿದ್ಯೆ ಮತ್ತು ಅವಿದ್ಯೆಯ ನಡುವಿನ ಅಂತರ ಅಗಾಧವಾದುದು. ಲೌಕಿಕ ಸುಖ-ಸಂತೋಷ, ಸಂಪತ್ತು, ಅಧಿಕಾರ, ಅಂತಸ್ತು ಮೊದಲಾದ ಅನಿತ್ಯ ಸಂಗತಿಗಳನ್ನು ವಶಮಾಡಿಕೊಳ್ಳುವುದಕ್ಕೆ ಸಹಾಯಕವಾಗಬಲ್ಲುದೆಲ್ಲವೂ ಅವಿದ್ಯೆ. ಅವಿದ್ಯೆಯಿಂದ ಗಳಿಸಿದ್ದೆಲ್ಲವೂ ಕ್ಷಣಿಕವಾದುದು. ಕ್ಷಣಿಕವಾದುದು. ತಾತ್ಕಾಲಿಕವಾದುದು. ಆದರೆ ನಿಜವಾದ ಮೂಲಕ ಗಳಿಸುವ ಜ್ಞಾನ ಆತ್ಮಜ್ಞಾನವಲ್ಲದೆ ಇನ್ನೊಂದಲ್ಲ, ಆತ್ಮನ ಅಸ್ತಿತ್ವ, ಸ್ವರೂಪ ಇತ್ಯಾದಿಗಳನ್ನು ಅರಿಯುವ ಮೂಲಕ ಪ್ರಾಪ್ತವಾಗುವ ಆತ್ಮಜ್ಞಾನವು ಸಚ್ಚಿದಾನಂದವನ್ನೇ ತಂದು ಕೊಡಬಲ್ಲುದು. ಸಚ್ಚಿದಾನಂದ ಅನಂತವಾದುದು. ಅದನ್ನು ಪಡೆದರೆ ಮತ್ತೆ ಈ ಮಿಥ್ಯಾ ಜಗತ್ತಿನ ಯಾವೊಂದು ಸುಖ-ಸಂತೋಷಗಳೂ ಬೇಡವೆನಿಸುವುವು. ಆತ್ಮಜ್ಞಾನದಿಂದ ಸಿಗುವ ಸಚ್ಚಿದಾನಂದವು ಅಮೃತ ಸಮಾನವಾದುದು. ಆದರೆ ಅದು ಎಲ್ಲರಿಗೂ ಸಿಕ್ಕೀತೇ? ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ: ” ಜ್ಞಾನವನ್ನು ಪಡೆಯಲು ಸಮತ್ವ ಬುದ್ಧಿರೂಪೀ ಕರ್ಮಯೋಗ ಬೇಕು; ಶುದ್ಧಾಂತಃಕರಣವೂ ಬೇಕು; ಸಾಧನೆಯ ಛಲವೂ ಇರಬೇಕು. ಸಮತ್ವದ ಬಲದಲ್ಲಿ ವಿಜೃಂಭಿಸುವ ಸಾತ್ವಿಕ ಗುಣದಿಂದ ಮಾತ್ರವೇ ಆತ್ಮನ ಅರಿವಿನ ಬೆಳಕು ಅಂತರಂಗದಲ್ಲಿ ಮೂಡುವುದು ಸಾಧ್ಯ. ಆ ಬೆಳಕು ತೇಜೋಮಯವಾಮದು.

   

Related Articles

error: Content is protected !!