ಕಾರ್ಕಳ : ಕಾಪು ಜನಾರ್ಧನ ದೇವಸ್ಥಾನದ ಬಳಿ ಇರುವ ಅಂಗಡಿಮನೆಯ ನಿವಾಸಿಯಾದ ಶೃತಿನ್ ಶೆಟ್ಟಿ ಎಂಬವರ ಮೃತದೇಹ ಕಾರ್ಕಳ ಸಮೀಪದ ಪುಲ್ಕೇರಿ ಬಳಿಯ ಬಾವಿಯಲ್ಲಿ ಪತ್ತೆಯಾಗಿದೆ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ
ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶೃತಿನ್ ಶೆಟ್ಟಿ ಎಂಬವರು ಅಕ್ಟೋಬರ್ 19 ರಂದು ಗುರುವಾರ ರಾತ್ರಿ 7.30 ಕ್ಕೆ ತನ್ನ ಹೆಂಡತಿಗೆ ಫೋನ್ ಮಾಡಿ ನಾನು ನಂದಿಕೂರಿನಲ್ಲಿದ್ದು ಮನೆಗೆ ಬರುತ್ತಿದ್ದಾಗಿ ಹೇಳಿದ್ದಾರೆ ನಂತರ ಅವರ ಫೋನ್ ಸ್ವಿಚ್ ಆಫ್ ಆಗಿತ್ತು ರಾತ್ರಿಯಿಡಿ ಮನೆಗೆ ಬಾರದಿರುವ ಹಿನ್ನೆಲೆಯಲ್ಲಿ ಗಾಬರಿಗೊಂಡ ಪತ್ನಿ ಪೂಜಾ ಶೆಟ್ಟಿಯವರು 20 ರಂದು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಸತತ ಹುಡುಕಾಟದ ನಂತರ ಪುಲ್ಕೇರಿ ಬಳಿಯ ಬಾವಿಯೊಂದರಲ್ಲಿ ಅವರ ಮೃತದೇಹ ಪತ್ತೆಯಾಗಿದೆ