ಉಡುಪಿ : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶ್ವ ಬಂಟರ ಸಮ್ಮೇಳನ – 2023ನ್ನು ನಗರದ ಅಜ್ಜರಕಾಡು ಮೈದಾನದಲ್ಲಿ ನಿರ್ಮಿಸಿರುವ ನಳಿನ ಭೋಜ ಶೆಟ್ಟಿ ವೇದಿಕೆಯಲ್ಲಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೀಪ ಬೆಳಗಿಸಿ ತೆಂಗಿನ ಕೊಂಬು ಅರಳಿಸುವ ಮೂಲಕ ಚಾಲನೆ ನೀಡಿದರು ನಂತರ ತುಳುವಿನಲ್ಲಿ ನಿಕ್ಲೆಗ್ ನಮಸ್ಕಾರ ಎಂದು ಮಾತು ಆರಂಭಿಸಿದ ಸಿಎಂ ಸಿದ್ದರಾಮಯ್ಯ ಬಂಟರು ಜಗತ್ತಿನ ಅನೇಕ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ ಬೇರೆ ಬೇರೆ ಕ್ಷೇತ್ರಗಳಲ್ಲಿ ವಿಶ್ವದಾದ್ಯಂತ ವಾಸ ಇರುವ ಬಂಟರು ಸಾಹಸಿಗಳು ರಾಜ್ಯಕ್ಕೆ ಬಂಟರ ಕೊಡುಗೆ ಅಪಾರವಾಗಿದೆ ಎಂದು ನುಡಿದರು
ರಾಜಕೀಯ ಉದ್ಯಮ ಕ್ರೀಡೆ ಸಿನಿಮಾ ಕ್ಷೇತ್ರದಲ್ಲಿ ಚಾಪು ಮೂಡಿಸಿರುವ ಬಂಟರು ಎಲ್ಲೇ ಇದ್ದರೂ ಕರಾವಳಿಯ ಸಂಸ್ಕೃತಿಯನ್ನು ಮರೆತಿಲ್ಲ ಇಬ್ಬರು ಕರಾವಳಿಗರು ಸಿಕ್ಕರೆ ತುಳುವಲ್ಲಿ ಮಾತನಾಡುತ್ತಾರೆ ಮಾತೃಭಾಷೆಯ ಬಗ್ಗೆ ಅಪಾರ ಪ್ರೇಮವಿದ್ದು ಕನ್ನಡ ಸಂಸ್ಕೃತಿ ಭಾಷೆ ಬೆಳಗಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ ಬಂಟರು ಜಾತ್ಯತೀತರು ಎಲ್ಲರನ್ನು ಮನುಷ್ಯರಾಗಿ ನೋಡುತ್ತಾರೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂದಿನ ಬಜೆಟ್‌ನಲ್ಲಿ ಬಂಟರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವುದಾಗಿ ಘೋಷಿಸಿದರು
ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ ನಮ್ಮ ದೇಶದ ಸಂಸ್ಕೃತಿ ಸಾಹಿತ್ಯ ಕಲೆಗೆ ಬಂಟರು ಗುರುತರ ಕೊಡುಗೆ ನೀಡಿದ್ದಾರೆ ಎಲ್ಲಾ ಕ್ಷೇತ್ರದಲ್ಲಿ ಬಂಟರ ಸಾಹಸ ಕೊಡುಗೆ ಬಹಳಷ್ಟು ಇದ್ದು ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾಗಿದ್ದಾರೆ ಎಂದರು
ವೇದಿಕೆಯಲ್ಲಿ ಬಾರ್ಕೂರು ಸಂಸ್ಥಾನದ ಸಂತೋಷ್ ಭಾರತೀ ಸ್ವಾಮೀಜಿ ಪುತ್ತಿಗೆ ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಜಿಲ್ಲಾಧಿಕಾರಿ ಕುಮಾರಿ ವಿದ್ಯಾಕುಮಾರಿ ಶಾಸಕರಾದ ಯಶ್ಪಾಲ ಸುವರ್ಣ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಉದ್ಯಮಿ ವಕ್ವಾಡಿ ಪ್ರವೀಣ್ ಶೆಟ್ಟಿ ಪ್ರಕಾಶ್ ಶೆಟ್ಟಿ ಎಂ ಎನ್ ರಾಜೇಶ್ ಕುಮಾರ್ ರೈ ಸುಪ್ರಸಾದ್ ಶೆಟ್ಟಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಬೈಕಾಡಿ ಸುಪ್ರಸಾದ್ ಶೆಟ್ಟಿ ಐಕಳ ಹರೀಶ್ ಶೆಟ್ಟಿ ಜಯಪ್ರಕಾಶ್ ಹೆಗ್ಡೆ ಯು ಟಿ ಖಾದರ್ ಪುತ್ತೂರು ಶಾಸಕ ಅಶೋಕ್ ರೈ ಮುಂತಾದವರು ಉಪಸ್ಥಿತರಿದ್ದರು