ಉಡುಪಿ : ಪೂಜ್ಯ ಪುತ್ತಿಗೆ ಶ್ರೀಪಾದರ ಆಶೀರ್ವಾದ ದೊಂದಿಗೆ ಮತ್ತು ಆದೇಶದಂತೆ ಲೋಕ ಕಲ್ಯಾಣ ಕ್ಕಾಗಿ ಅಮೆರಿಕಾದ ಪ್ರಥಮ ದೇವಾಲಯವಾದ ಶ್ರೀ ವೆಂಕಟಕೃಷ್ಣ ಕ್ಷೇತ್ರ ದಲ್ಲಿ ಒಂಬತ್ತು ದಿನಗಳ ಕಾಲ ನಡೆಯಲಿರುವ ಸಂಹಿತಾ ಯಾಗದ ಅಂಗವಾಗಿ ಅಮೆರಿಕಾದಲ್ಲಿಯೇ ಇದೇ ಮೊದಲಬಾರಿಗೆ ರಾಶಿ ಪೂಜೆ ಪ್ರಾರಂಭಗೊಂಡಿದೆ ಮೇಷಾದಿ ರಾಶಿಗಳಲ್ಲಿ ಸೂರ್ಯನ ಸಂಚಾರದ ಅನುಗುಣವಾಗಿ ಸಕಲಗ್ರಹ ಅಂತರ್ಯಾಮಿಯಾಗಿ ಶ್ರೀಮನ್ನಾರಾಯಣನನ್ನು ವೈಭವದಿಂದ ಪೂಜಿಸುವ ಈ ವಿಶಿಷ್ಟ ಪದ್ದತಿಯ ಸಾಂಪ್ರದಾಯಿಕ ಆಚರಣೆ ಇಂದು ಅಮೇರಿಕಾದ ಶ್ರೀಪುತ್ತಿಗೆ ಮಠದ ಮೊದಲ ಶಾಖೆಯಾದ ಫಿನೀಕ್ನನ ಶ್ರೀ ವೆಂಕಟಕೃಷ್ಣ ಕ್ಷೇತ್ರದಲ್ಲಿ ಸಂಪನ್ನಾಗೊಂಡಿತು
ಬೆಳಿಗ್ಗೆ 4ರಿಂದಲೇ ಶ್ರೀ ವೆಂಕಟೇಶ್ವರನಿಗೆ ಪ್ರಸನ್ನ ಕಲಶಾಭಿಷೇಕದಿಂದ ಪ್ರಾರಂಭಗೊಂಡು ಶ್ರೀನಿವಾಸನ ಉತ್ಸವಮೂರ್ತಿಯ ಅಟ್ಟೆ ಪ್ರಭಾವಳಿಯ ಮೆರವಣಿಗೆಯಲ್ಲಿ ಅಖಂಡ ನಾಮ ಪಾರಾಯಣದೊಂದಿಗೆ ಭಕ್ತ ಜನರು ಸಂಭ್ರಮದಿಂದ ಪಾಲ್ಗೊಂಡರು ಈ ರಾಶಿಪೂಜೆಯು ಅಹೋರಾತ್ರಿ ನಡೆಯಲಿದೆ .ಜೊತೆಗೆ ಆಯಾ ರಾಶಿಯಲ್ಲಿ ಸಂಜಾತ ಭಕ್ತ ಜನತೆ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದು ಎಲ್ಲಡೆ ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ
ಶ್ರೀಮಠದ ವಿದ್ವಾoIಸರಾದ ವೇದ ಮೂರ್ತಿ ಕಿದಿಯೂರು ರಾಮದಾಸ ಭಟ್ ವೇದಮೂರ್ತಿ ಹೆರ್ಗ ವೇದವ್ಯಾಸ ಭಟ್ ಹಾಗೂ ವಿದ್ವಾನ್ ರಾಘವೇಂದ್ರ ಕೊಡಂಚ ಅವರ ಸಮುಪಸ್ಥಿತಿಯಲ್ಲಿ ಸುಮಾರು ಇಪ್ಪತ್ತು ಜನರ ಋತ್ವಿಜರ ತಂಡ ಕಾರ್ಯಕ್ರಮಗಳನ್ನು ನಡೆಸಿ ಕೊಡುತ್ತಿದ್ದಾರೆ .ಶ್ರೀಮಠದ ವಿದೇಶಿ ಶಾಖೆಗಳ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನಾಚಾರ್ಯ ಮತ್ತು ಫಿನಿಕ್ಸ್ ನ ಶ್ರೀಮಠದ ಪ್ರಧಾನ ಅರ್ಚಕರಾದ ಶ್ರೀ ಕಿರಣ್ ಕುಮಾರ್ ರವರ ಸಂಯೋಜಕತ್ವದಲ್ಲಿ ಸಮಸ್ತ ಭಕ್ತ ಜನರ ಸಹಕಾರದೊಂದಿಗೆ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯುತ್ತಿದ್ದು ಫೀನಿಕ್ಸ್ ಮಹಾನಗರದಲ್ಲಿ ಉತ್ಸವದ ವಾತಾವರಣ ಮೂಡಿ ಬಂದಿದೆ