ಕುಂದಾಪುರ : ಲೋಕಾಯುಕ್ತ ಪೊಲೀಸರು ರಾಜ್ಯದ 13 ಜಿಲ್ಲೆಗಳಲ್ಲಿ 69 ಕಡೆ ದಾಳಿ ನಡೆಸಿ 17 ಮಂದಿ ಭ್ರಷ್ಟರನ್ನು ಭೇಟೆಯಾಡಿದ್ದಾರೆ ಲೋಕಾಯುಕ್ತ ದಾಳಿ ವೇಳೆ ಮನೆಯ ಲಾಕರ್ ಗಳಲ್ಲಿ ನೋಟಿನ ಕಂತೆ ಕಂತೆ ಕೆ ಜಿಗಟ್ಟಲೇ ಚಿನ್ನ ಬೆಳ್ಳಿ ಹಾಗೂ ಕೊಟ್ಯಾಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದ್ದು ಭ್ರಷ್ಟರು ತಮ್ಮ ನಿಗದಿತ ಆದಾಯದ ಮೂಲಗಳಿಗಿಂತ ಅಧಿಕವಾದ ಚರ ಸ್ಥಿರಾಸ್ಥಿ ಗಳಿಸಿದ ಮಾಹಿತಿಯನ್ನು ಲೋಕಾಯುಕ್ತ ಪೊಲೀಸರು ಕಲೆ ಹಾಕಿದ್ದಾರೆ
ಕುಂದಾಪುರದಲ್ಲೂ ದಾಳಿ
ಕುಂದಾಪುರ ನಗರದ ವಡೇರಹೋಬಳಿಯ ನೆಹರು ಮೈದಾನದ ಹಿಂಬದಿಯಲ್ಲಿರುವ ಸಲೀಂ ಆಲಿ ರಸ್ತೆಯ ನಿವಾಸಿಯಾಗಿರುವ ಉಡುಪಿ ವಾಣಿಜ್ಯ ತೆರಿಗೆ ಕಚೇರಿಯಲ್ಲಿ ಸಹಾಯಕ ಆಯುಕ್ತರಾದ ರಾಜೇಶ್ ಬೆಳ್ಕೆರೆಯವರ ಮನೆ ಹಾಗೂ ಕಚೇರಿ ಮೇಲೆ ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ತಪಾಸಣೆ ನಡೆಸಿದ್ದಾರೆ
ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿರುವ ರಾಜೇಶ್ ರವರ ಮನೆ ಉಡುಪಿಯ ಕಚೇರಿ ಹಾಗೂ ಕುಂದಾಪುರ ನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಿ ಸೋಮವಾರ ತಡರಾತ್ರಿಯವರೆಗೂ ತೀವ್ರ ತಪಾಸಣೆ ಕೈಗೊಂಡಿದ್ದಾರೆ ಸೋಮವಾರ ನುಸುಕಿನಲ್ಲಿಯೇ 7 ಮಂದಿ ಲೋಕಾಯುಕ್ತ ಅಧಿಕಾರಿಗಳ ತಂಡ 2 ಕಾರುಗಳಲ್ಲಿ ಆಗಮಿಸಿ ಮಾಹಿತಿ ಹಾಗೂ ದಾಖಲೆಗಳನ್ನು ಸಂಗ್ರಹಿಸಿದ್ದು ಮನೆಯ ಮಹಡಿಯಲ್ಲಿ ಫೈನಾನ್ಸ್ ವ್ಯವಹಾರ ನಡೆಯುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ ದಾಳಿಯಲ್ಲಿ ಮಂಗಳೂರು ಲೋಕಾಯುಕ್ತ ಎಸ್ ಪಿ ಸೈಮನ್ ತಂಡ ಹಾಗೂ ಉಡುಪಿ ಲೋಕಾಯುಕ್ತ ಡಿ ವೈ ಎಸ್ ಪಿ ಪ್ರಕಾಶ್‌ರವರ ತಂಡ ಕಾರ್ಯಚರಣೆ ನಡೆಸಿದ್ದಾರೆ