ಕುಂದಾಪುರ : ಭರತನಾಟ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಹಳೇ ವಿದ್ಯಾರ್ಥಿಯಾದ ಭಾಗೀರಥಿ ಎಂ ಆರ್ ರವರು ಈ ಭಾರಿಯ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ
ಭಾಗೀರಥಿ ಎಂ ಆರ್ ರವರು ಕುಂದಾಪುರ ಸಮೀಪದ ತೆಕ್ಕಟ್ಟೆಯ ನಿವಾಸಿಯಾದ ದಿವಂಗತ ಯು ಜಯರಾಮ್ ರಾವ್ ಹಾಗೂ ನವೀನಾರವರ ಪುತ್ರಿಯಾಗಿದ್ದು ಹಂಗಳೂರಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಕೋಟೇಶ್ವರದ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿ ಕಾಂ ಪದವಿ ಶಿಕ್ಷಣವನ್ನು ಪೂರೈಸಿದ್ದರು
ಭರತನಾಟ್ಯದಲ್ಲಿ ವಿದ್ವತ್ ಪದವಿ ಪಡೆದ ಇವರು ಭರತನಾಟ್ಯ ಶಿಕ್ಷಕಿಯಾಗಿ ಹಾಗೂ ಯಕ್ಷಗಾನದಲ್ಲಿ ಹವ್ಯಾಸಿ ಕಲಾವಿದೆಯಾಗಿ ಸೇವೆ ಸಲ್ಲಿಸಿದ್ದರು ಇವರು ಸಂಗೀತ ಮುಖವರ್ಣಿಕೆ ಚಿತ್ರಕಲೆ ನಾಟಕ ಭಾಗವತಿಕೆ ಮತ್ತು ಮಕ್ಕಳಿಗೆ ಯಕ್ಷಗಾನ ಕಲಿಸುವುದರೊಂದಿಗೆ ವಿವಿಧ ಪ್ರಾಕಾರದ ನೃತ್ಯ ರೂಪಕಗಳನ್ನು ಸೃಷ್ಠಿಸಿದ್ದರು
ಉಡುಪಿಯ ಬಡಗುಬೆಟ್ಟು ನಿವಾಸಿಯಾದ ಮಧುಕರ್ ಬಿ ರಾವ್ ರವರ ಪತ್ನಿಯಾದ ಇವರು ಯಕ್ಷ ಮಹಿಳಾ ಬಳಗ ಯಕ್ಷಸಿರಿ ವನಿತಾ ಬಳಗ ಬ್ರಹ್ಮಾವರ ಶ್ರೀ ನಟೇಶ ಯಕ್ಷ ಬಾಲೆಯರ ಬಳಗ ಹಾಗೂ ಶ್ರೀ ನಟರಾಜ ನೃತ್ಯ ನಿಕೇತನದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದು ಇಂದು ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ