Home » ಮಕ್ಕಳ ಯಕ್ಷಗಾನ ಸ್ಥಗಿತಕ್ಕೆ ಆಕ್ರೋಶ
 

ಮಕ್ಕಳ ಯಕ್ಷಗಾನ ಸ್ಥಗಿತಕ್ಕೆ ಆಕ್ರೋಶ

by Kundapur Xpress
Spread the love

ಕುಂದಾಪುರ ಸಮೀಪದ ಹೇರಿಕುದ್ರುವಿನಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಮಹಾ ಗಣಪತಿ ಮಾನಸ ಮಂದಿರದಲ್ಲಿ ನಡೆಯುತ್ತಿದ್ದ ಮಕ್ಕಳ ಯಕ್ಷಗಾನವು ವ್ಯಕ್ತಿಯೊಬ್ಬರ ದೂರಿನಿಂದಾಗಿ ಅರ್ಧಕ್ಕೆ ನಿಂತ ಪ್ರಸಂಗ ನಡೆದಿದೆ

ನವಂಬರ್ 3 ರಿಂದ ನವೆಂಬರ್ 11 ರವರೆಗೆ ಆಯೋಜನೆಯಾದ ಯಕ್ಷ ಹಬ್ಬ ಕಾರ್ಯಕ್ರಮದಲ್ಲಿ ಗೆಜ್ಜೆನಾದ ಯಕ್ಷಗಾನ ಕಲಾ ಮಂಡಳಿ ಕುಂದಾಪುರ ಇವರಿಂದ ಶ್ರೀ ಕೃಷ್ಣ ಲೀಲಾಮೃತ ಯಕ್ಷಗಾನ ಪ್ರಸಂಗ  ನಡೆಯುತ್ತಿತ್ತು ಈ ವೇಳೆ ಸ್ಥಳಿಯರೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ಆಗಮಿಸಿ ಪ್ರದರ್ಶನ ಸ್ಥಗಿತಗೊಳಿಸಲು ಸೂಚಿಸಿದ್ದಾರೆ

ಪೊಲೀಸರ ಈ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು ಯಕ್ಷಗಾನ ಪ್ರೇಮಿಗಳ ಆಕ್ರೋಶಕ್ಕೂ ಕಾರಣವಾಗಿದೆ ಈ ಸಂದರ್ಭದಲ್ಲಿ ಯಕ್ಷಗಾನ ನಿಲ್ಲಿಸಬಾರದಾಗಿತ್ತು ಖಾಸಗಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಬಳಕೆಗೆ ನಿಯಂತ್ರಣ ಮಾಡಬಹುದಿತ್ತು ವಿನ: ಪ್ರದರ್ಶನ ನಿಲ್ಲಿಸಿದ್ದು ಸರಿಯಲ್ಲ ಅಥವಾ ಎಚ್ಚರಿಕೆ ಕೊಟ್ಟು ಮುಂದಿನ ದಿನಗಳಲ್ಲಿ ಸಮಯಕ್ಕೆ ಸರಿಯಾಗಿ ಯಕ್ಷಗಾನ ಮುಗಿಸುವಂತೆ ಸೂಚಿಸಬಹುದಿತ್ತು ಎಂಬ ಆಕ್ರೋಶದ ಮಾತುಗಳು ಕೇಳಿಬಂದಿದೆ ಈ ಮಧ್ಯೆ ಯಕ್ಷೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಮಹಾಬಲ ಹೇರಿಕುದ್ರುರವರು ಮಕ್ಕಳ ಯಕ್ಷಗಾನವನ್ನು ಅರ್ಧದಲ್ಲಿ ಸ್ಥಗಿತಗೊಂಡ ಬಗ್ಗೆ ಅವರು ವಿವರಣೆ ನೀಡಿದ್ದಾರೆ

   

Related Articles

error: Content is protected !!