ಕೋಟೇಶ್ವರ : ಬದಲಾಗುತ್ತಿರುವ ಜಗತ್ತಿನಲ್ಲಿ ಮಹಿಳೆ ಹಲವಾರು ಅವಕಾಶ ಮತ್ತು ಸವಾಲುಗಳನ್ನು ಎದುರಿಸಬೇಕಾಗಿದೆ. ಪಾರಂಪರಿಕವಾದ ಕುಟುಂಬದ ನಿರ್ವಹಣೆ ಜೊತೆಗೆ ಉದ್ಯೋಗ ವ್ಯವಹಾರ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆ ಅಪಾರ ಇವೆಲ್ಲಕ್ಕಿಂತ ಮಹಿಳೆಯೇ ಮಕ್ಕಳಿಗೆ ತಾಯಿಯಾಗಿ ಕುಟುಂಬದ ಎಲ್ಲರ ಕ್ಷೇಮವನ್ನು ಸಂಸ್ಕ್ರತಿಯನ್ನು ಉಳಿಸುವ ಬೆಳೆಸುವ ಶಕ್ತಿಯಾಗಿದ್ದಾಳೆ. ಸಮಾಜದ ನೆಮ್ಮದಿ ಮತ್ತು ಅಭಿವೃದ್ಧಿಯು ಕುಟುಂಬಗಳನ್ನು ಅವಲಂಬಿಸಿದೆ. ಕುಟುಂಬದ ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ ಮತ್ತು ಕೊಡುಗೆ ಅಪಾರ ಎಂದು ಕುಂದಾಪುರ ತಹಶೀಲ್ದಾರ್ ಶ್ರೀಮತಿ ಶೋಭಾಲಕ್ಷ್ಮೀ ಹೇಳಿದರುಅವರು ಕೋಟೇಶ್ವರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಇಲ್ಲಿನ ರೆಡ್ ಕ್ರಾಸ್ ಘಟಕ ಮತ್ತು ಮಹಿಳಾ ವೇದಿಕೆಯ ಆಶ್ರಯದಲ್ಲಿ ನಡೆದ ಮಹಿಳೆ ಮತ್ತು ಸಮುದಾಯ ಅಭಿವೃದ್ಧಿ ಕುರಿತ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್ ನಾಯಕ ಅಂಬೇಡ್ಕರ್ ಬರಹಗಳಲ್ಲಿ ಮಹಿಳೆ, ಸಮಾನತೆ ಮತ್ತು ಅಭಿವೃದ್ಧಿ ಕುರಿತ ವಿಚಾರಗಳನ್ನು ವಿವರಿಸಿದರು.
ಐಕ್ಯೂಎಸಿ ಸಂಚಾಲಕ ಶ್ರೀ ನಾಗರಾಜ ಯು ಮತ್ತು ಮಹಿಳಾ ವೇದಿಕೆಯ ಸಂಚಾಲಕರಾದ ಡಾ. ಭಾಗೀರಥಿ ನಾಯ್ಕ ಉಪಸ್ಥಿತರಿದ್ದರು. ರೆಡ್ ಕ್ರಾಸ್ ಸಂಚಾಲಕ ಡಾ. ಶೇಖರ್ ಬಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಡಾ. ವೆಂಕಟರಾಮ ಭಟ್ ಪ್ರಸ್ತಾವನೆಗೈದರು ವಿದ್ಯಾರ್ಥಿನಿಯರಾದ ಶ್ರೇಯಾ ಮತ್ತು ತಂಡ ಪ್ರಾರ್ಥಿಸಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀ ರಾಮರಾಯ ಆಚಾರ್ಯ ವಂದಿಸಿದರು. ಉಪನ್ಯಾಸಕಿ ಶ್ರೀಮತಿ ಶ್ವೇತಾ ಕುಮಾರಿ ಕಾರ್ಯಕ್ರಮ ನಿರ್ವಹಿಸಿದರು.