Home » ಕಾವ್ರಾಡಿ ಪಂಚಾಯತ್‌ ಕಾರ್ಯದರ್ಶಿ ಸೆರೆ
 

ಕಾವ್ರಾಡಿ ಪಂಚಾಯತ್‌ ಕಾರ್ಯದರ್ಶಿ ಸೆರೆ

by Kundapur Xpress
Spread the love

ಕುಂದಾಪುರ : ಬಸವ ವಸತಿ ಯೋಜನೆಗೆ ಸಂಬಂಧಿಸಿದಂತೆ ಲಂಚ ಸ್ವೀಕರಿಸುತ್ತಿದ್ದ ಕಾವ್ರಾಡಿ ಗ್ರಾಮ ಪಂಚಾಯತ್‌ ಕಾರ್ಯದರ್ಶಿಯಾದ ಗೋಪಾಲ್‌ ದೇವಾಡಿಗ ಎಂಬವರನ್ನು ಉಡುಪಿ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ

ಕಾವ್ರಾಡಿಯ ಜಾವೇದ್‌ ಎಂಬವರು ಬಸವ ವಸತಿ ಯೋಜನೆಯಡಿ ಪಂಚಾಯತ್‌ಗೆ ಅರ್ಜಿ ಸಲ್ಲಿಸಿದ್ದರು ಇದಕ್ಕೆ ಕಾವ್ರಾಡಿ ಗ್ರಾಮ ಪಂಚಾಯತ್‌ ಕಾರ್ಯದರ್ಶಿ ಗೋಪಾಲ್‌ ದೇವಾಡಿಗ 15.000 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಲಂಚ ನೀಡಲು ಇಷ್ಟವಿಲ್ಲದ ಜಾವೇದ್‌ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ದೂರು ಸ್ವೀಕರಿಸಿದ ಲೋಕಾಯುಕ್ತ ಪೊಲೀಸರು ಜಾವೇದ್‌ ಅವರಿಂದ 15.000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಕಾರ್ಯದರ್ಶಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ

ಲೋಕಾಯುಕ್ತ ಎಸ್ಪಿ ಸೈಮನ್‌ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಕೆ ಸಿ ಪ್ರಕಾಶ್‌ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಮಂಜುನಾಥ ಹಾಗೂ ರಫೀಕ್‌ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

   

Related Articles

error: Content is protected !!