Home » ಸೇನೆ ಸೇರಲು ಪ್ರೇರಣಾ ಶಿಬಿರ
 

ಸೇನೆ ಸೇರಲು ಪ್ರೇರಣಾ ಶಿಬಿರ

by Kundapur Xpress
Spread the love

ಕುಂದಾಪುರ : ಇಲ್ಲಿನ ಭಂಡಾರ್ಕಾರ್ಸ್  ಕಲಾ ಮತ್ತು ವಿಜ್ಞಾನ ಕಾಲೇಜು  ಇವರ ಆಶ್ರಯದಲ್ಲಿ 2A COY ಬಟಾಲಿಯನ್ ಇವರಿಂದ ವಿದ್ಯಾರ್ಥಿಗಳನ್ನು ಸೈನ್ಯ ಹಾಗೂ ರಕ್ಷಣಾ ಪಡೆಗಳಿಗೆ ಸೇರಲು ಉತ್ತೇಜಿಸುವ ಪ್ರೇರಣಾ ಕಾರ್ಯಾಕ್ರಮ ಜರುಗಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ   ಎನ್ ಎಸ್.ಜಿ ಕಮಾಂಡೋ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಂಜುನಾಥ್ ನಾಯಕ್ ಅವರು ಮಾತನಾಡಿ “ಮೊದಲು ನಮ್ಮ ಊರಿನವರಿಗೆ ಸೈನ್ಯ ಸೇರುವ ಬಗ್ಗೆ ಅಷ್ಟೊಂದು ಮಾಹಿತಿ ಇರಲಿಲ್ಲ ಆದರೆ ಈಗ ಎಲ್ಲರಿಗೂ ಮಾಹಿತಿ ನೀಡುವಂತ ಕಾರ್ಯ ನಡೆಯುತ್ತಾ ಇದೆ. ನಾನು ಸೈನ್ಯಕ್ಕೆ ಸೇರಲು 10ನೇ ತರಗತಿಯ ನಂತರವೇ ಪ್ರಯತ್ನ ಪಟ್ಟೆ ಆದರೆ  ಕಾರ್ಗಿಲ್ ನ ಭಯ ಇದ್ದುದರಿಂದ ಮನೆಯವರು ಒಪ್ಪಿಗೆ ನೀಡದ ಕಾರಣ ಅಲ್ಲಿಗೆ ಬಿಡಬೇಕಾಯಿತು ಆದರೆ ಅದಾದ 2-3 ವರ್ಷಗಳಲ್ಲಿ ಪುನಃ ಪ್ರಯತ್ನಿಸಿ ಸೈನ್ಯಕ್ಕೆ ಸೇರಿದೆ “ಎಂದು ತಮ್ಮ ಅಭ್ಯಾಸ ಕಲಾವಧಿಯ ಅನುಭವಗಳನ್ನು ಹೇಳುವ ಮೂಲಕ ವಿದ್ಯಾರ್ಥಿಗಳನ್ನು ಪ್ರೆರೇಪಿಸಿದರು.

ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಂಡಾರ್ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ಗಳು ಹಾಗೂ ಕಾಲೇಜಿನ ಆರ್ಮಿ ವಿಂಗ್ ನಲ್ಲಿ ಕೆಡೆಟ್ ಆಗಿ ಪ್ರಸ್ತುತ ಸಮಯದಲ್ಲಿ ಭಾರತೀಯ ವಾಯುಪಡೆಯಲ್ಲಿ  ಕಾರ್ಯ ನಿರ್ವಹಿಸುತ್ತಿರುವ LAC ವೇದಾಂತ್, ಎಲ್.ಎ.ಸಿ.ಶಿಶಿರ್ ಸುವರ್ಣ ಅವರು ಕೂಡ ವಿದ್ಯಾರ್ಥಿಗಳನ್ನು ಪ್ರೆರೇಪಿಸಿದರು

ಈ ಸಂದರ್ಭದಲ್ಲಿ ಪ್ರಾಂಶುಪಾಲಾರದ ಡಾ|ಶುಭಕರಾಚಾರಿ, ಕ್ಯಾಪ್ಟನ್ ಅಂಜನ್  ಕುಮಾರ್ ಎ.ಎಲ್. ಬಿ.ಹೆಚ್.ಎಂ. ಮಹೇಂದ್ ನಿಂಬು ಮತ್ತು ಹವಾಲ್ದಾರ್ ಪೌದು ಅವರು ಉಪಸ್ಥಿತರಿದ್ದರು. ಈ ಸಮಯದಲ್ಲಿ  ಎಲ್.ಸಿ.ಪಿ.ಎಲ್ ವೈಷ್ಣವಿ ಪೈ ಆಟಕೆರೆ  ಸ್ವಾಗತಿಸಿದರು. ಸಿ.ಕ್ಯೂ.ಎಮ್.ಎಸ್. ಅನುಷಾ ವಂದಿಸಿದರು.  ಜೆ.ಯು.ಒ. ಶ್ರೇಯಾ ಎಸ್‌ ಅವರು ಕಾರ್ಯಕ್ರಮದ ನಿರ್ವಹಿಸಿದರು.

   

Related Articles

error: Content is protected !!