ತೆಕ್ಕಟ್ಟೆ: ವಿಶ್ವವಿನಾಯಕ ನ್ಯಾಷನಲ್ ಇಂಗ್ಲೀಷ್ ಮೀಡಿಯಮ್ ಸ್ಕೂಲ್‌ನ ವಾರ್ಷಿಕ ಕ್ರೀಡೋತ್ಸವ ಶಾಲಾ ಕ್ರೀಡಾಂಗಣದಲ್ಲಿ ಜರುಗಿತು ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೋಟ ಪೋಲಿಸ್ ಠಾಣೆಯ ASI ಬಿ. ರವಿ ಕುಮಾರ್‌ರವರು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುವುದರೊಂದಿಗೆ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದರೆ ಬದುಕನ್ನು ಕಟ್ಟಿಕೊಳ್ಳಬಹುದೆಂದು ಅಭಿಪ್ರಾಯಪಟ್ಟರು
ಕಾರ‍್ಯಕ್ರಮದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂದಾಪುರ ವಲಯದ ರೇಂಜ್ ಪೋರೆಸ್ಟ್ ಆಫಿಸರ್ ಟಿ. ಕಿರಣ್ ಬಾಬುರವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಇದ್ದು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಹೇಳಿದ ಅವರು ಶರೀರವನ್ನು ಸಧೃಢಗೊಳಿಸಲು ಶಾರೀರಿಕ ವ್ಯಾಯಾಮ ಬಹು ಮುಖ್ಯ ಎಂದು ತಿಳಿಸಿದರು
ಶಾಲಾ ಪ್ರಾಂಶುಪಾಲರಾದ ನಿತಿನ್ ಡಿ’ ಆಲ್ಮೇಡಾರವರು ಮಾತನಾಡಿ ಕ್ರೀಡೆಗಳು ಶಿಸ್ತು, ಸಂಯಮ ಹಾಗೂ ಏಕಾಗ್ರತೆಯನ್ನು ಕಲಿಸುವಲ್ಲಿ ಸಹಕಾರಿಯಾಗಲಿದೆ ಎಂದರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಂ. ಪ್ರಭಾಕರ ಶೆಟ್ಟಿಯವರು ಮಕ್ಕಳ ಉತ್ಸಾಹ ಹಾಗೂ ಸ್ಪರ್ಧಾ ಮನೋಭಾವವನ್ನು ಪ್ರಶಂಸಿದರು. ವಿವಿಧ ಆಟೋಟ ಹಾಗೂ ಕ್ರೀಡೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.ಕಾರ‍್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಡ್ರಿಲ್, ಯೋಗ, ಲೇಜಿಮ್, ಡಂಬಲ್ಸ್, ಹೂಪ್ಸ್, ಕರಾಟೆ, ಮೊದಲಾದ ಸಾಹಸ ಕ್ರೀಡೆಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಕರುಗಳಾದ ಆನಂದ್ ಹಾಗೂ ಪ್ರದೀಪ್ ಕುಮಾರ್ ಶೆಟ್ಟಿಯವರು ಕಾರ‍್ಯಕ್ರಮ ಸಂಘಟಿಸಿದರು ಶಿಕ್ಷಕಿಯರಾದ ಸ್ವಾತಿ ರಾವ್ ಹಾಗೂ ಜೆನಿಶಾ ಕ್ರಾಸ್ಟೋ ಕಾರ‍್ಯಕ್ರಮ ನಿರ್ವಹಿಸಿದರು, ಶಿಕ್ಷಕಿ ಸ್ಮಿತಾ ನಾಯಕ್ ಹಾಗೂ ಪ್ರಜ್ಞಾ ಕಾಮತ್ ಸ್ವಾಗತಿಸಿ ಪರಿಚಯಿಸಿದರು, ಶ್ವೇತಾ ಹಾಗೂ ಮಂಜುಶ್ರೀ ವಂದಿಸಿದರು