ಕುಂದಾಪುರ : ಪ್ರಕೃತಿಯು ಮನುಷ್ಯನ ಎಲ್ಲಾ ಅಗತ್ಯಗಳನ್ನು ಪೂರೈಸಲು ಸರ್ವಶಕ್ತವಾಗಿದ್ದರೂ ಮನುಷ್ಯನು ಇಂದು ಅನೇಕ ಸಂದರ್ಭಗಳಲ್ಲಿ ಪ್ರಕೃತಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾನೆ. ನಾವು ಪ್ರಕೃತಿಯ ಒಂದು ಅಂಗ ಎನ್ನುವುದನ್ನು ಮರೆಯಬಾರದು ಎಂದು ಪಿಯುಷ್ ಆಯುರ್ವೇದ ಆರೋಗ್ಯ ಕೇಂದ್ರ ಇದರ ವೈದ್ಯರಾಗಿರುವ ಡಾ| ಚರಿಷ್ಮಾ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ನೇಚರ್ ಕ್ಲಬ್ನ ವಾರ್ಷಿಕ ಚಟುವಟಿಕೆ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪೆÇ್ರ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನೇಚರ್ ಕ್ಲಬ್ನ ಸಂಯೋಜಕ ವಾಣಿಜ್ಯ ಪ್ರಾಧ್ಯಾಪಕ ಶ್ರೀ ಸುಧೀರ್ ಕುಮಾರ್ ಸ್ವಾಗತಿಸಿ, ವಾಣಿಜ್ಯ ಪ್ರಾಧ್ಯಾಪಕಿ ಶ್ವೇತಾ ಭಂಡಾರಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಶ್ರೇಯಾ ಖಾರ್ವಿ ಪ್ರಾರ್ಥಿಸಿದರು. ನಂತರ ನೇಚರ್ ಕ್ಲಬ್ ವಿದ್ಯಾರ್ಥಿಗಳಿಗೆ ಗಿಡಮೂಲಿಕೆಗಳ ಪರಿಚಯ ಸ್ಪರ್ಧೆಯನ್ನು ಆಯೋಜಿಸಲಾಯಿತು.