Home » ಗುರುಕುಲ : ವಾರ್ಷಿಕ ಕ್ರೀಡಾಕೂಟ
 

ಗುರುಕುಲ : ವಾರ್ಷಿಕ ಕ್ರೀಡಾಕೂಟ

by Kundapur Xpress
Spread the love

ಕೋಟೇಶ್ವರ : ಕ್ರೀಡೆಗೆ ಜಗತ್ತನ್ನು ಬದಲಾಯಿಸುವ ಶಕ್ತಿ ಇದೆ.  ಅದಕ್ಕೆ ಸ್ಫೂರ್ತಿ ನೀಡುವ ಶಕ್ತಿ ಇದೆ. ಬೇರೆಯವರು ಮಾಡದ ರೀತಿಯಲ್ಲಿ ಜನರನ್ನು ಒಂದುಗೂಡಿಸುವ ಶಕ್ತಿ ಇದಕ್ಕಿದೆ ಹಂಗೇರಿಯ ಶೂಟರ್ ಕಾರ್ಲೆ ಟಕಾಕ್ಸ್ ಅವರು ಬಲಗೈ ಸೋತರೂ ಎಡಗೈಯಿಂದ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದಿದ್ದಾರೆ ಎಂದು ಕುಂದಾಪುರ ಸಹಾಯಕ ಕಮೀಶನರ್‌ ರಶ್ಮಿ ಎಸ್‌ ಆರ್‌ ನುಡಿದರು  ಅವರು ವಕ್ವಾಡಿಯ ಗುರುಕುಲ ಸಮೂಹ ಸಂಸ್ಥೆಯ ಗುರುಕುಲ ಮೈದಾನದಲ್ಲಿ18 ನೇ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು

ಸಮಾರಂಭದಲ್ಲಿ  ಜಂಟಿ ಆಡಳಿತ ಟ್ರಸ್ಟಿಗಳಾದ ಶ್ರೀ ಸುಭಾಶ್ಚಂದ್ರ ಶೆಟ್ಟಿ ಮತ್ತು ಶ್ರೀಮತಿ ಅನುಪಮಾ ಎಸ್ ಶೆಟ್ಟಿ, ಗುರುಕುಲ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಅವಿನಾಶ್, ಮತ್ತು ಗುರುಕುಲ ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲರಾದ ಮೋಹನ್ ಕೆ.   ಸಮಾರಂಭದಲ್ಲಿಉಪಸ್ಥಿತರಿದ್ದರು  ಪಥ ಸಂಚಲನವನ್ನು ಪ್ರಾರಂಭಿಸಲು ಮುಖ್ಯ ಅತಿಥಿಗಳಿಂದ ಶಾಲಾ ಕ್ಯಾಪ್ಟನ್ ಮಾಸ್ಟರ್ ಧವಳ್ ಶೆಟ್ಟಿ ಅನುಮತಿ ಪಡೆದರು.  ಎಲ್ಲಾ ನಾಲ್ಕು ಹೌಸ್ ನ ವಿದ್ಯಾರ್ಥಿಗಳು   ವೈಭವಯುತವಾಗಿ ಮತ್ತು ಸಿಂಕ್ರೊನೈಸ್ ಮಾಡಿ ಮಾರ್ಚ್ ಪಾಸ್ಟ್ ಮಾಡಿದರು

ಶಾಲೆಯ ಕ್ರೀಡಾ ನಾಯಕ ಮಾಸ್ಟರ್ ಶ್ರೇಯಸ್ ಗೌಡ ಪ್ರಮಾಣ ವಚನ ಸ್ವೀಕರಿಸಿದರು. ಜಂಟಿ  ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮಾ ಎಸ್ ಶೆಟ್ಟಿ ಅವರು ಮುಖ್ಯ ಅತಿಥಿಗಳಿಗೆ ನೆನಪಿನ ಕಾಣಿಕೆ ಹಸ್ತಾಂತರಿಸಿದರು. ಕಾರ್ಯಕ್ರಮವನ್ನು ಸಹಶಿಕ್ಷಕಿ ಸುಜಾತ ಕಿರಣ್ ಶೆಟ್ಟಿ ನಿರೂಪಿಸಿದರು.ಪಿಯು ಉಪನ್ಯಾಸಕರಾದ ಶ್ರೀ ನಾಗೇಶ್ ಅವರು ಎಲ್ಲರನ್ನು ಸ್ವಾಗತಿಸಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸಹಶಿಕ್ಷಕಿ ಶ್ರೀಮತಿ ಸುಮಲತಾ ವಂದಿಸಿದರು.

 

   

Related Articles

error: Content is protected !!