Home » ಕುಡಿಯುವ ನೀರು-ಚರಂಡಿ ಪಾಲು
 

ಕುಡಿಯುವ ನೀರು-ಚರಂಡಿ ಪಾಲು

by Kundapur Xpress
Spread the love

ಕುಂದಾಪುರ : ನಗರದ ಬರೆಕಟ್ಟು ರಸ್ತೆಯಿಂದ ರಂಗನಹಿತ್ಲಿಗೆ ಹೋಗುವ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್‌ ಒಡೆದಿದ್ದು ಅಪಾರ ಪ್ರಮಾಣದ ನೀರು ಚರಂಡಿಗೆ ಹರಿದು ಪೋಲಾಗುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ ರಂಗನ ಹಿತ್ಲಿಗೆ ಹೋಗುವ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಅಳವಡಿಸಲಾಗಿದ್ದು ಭಾರಿ ವಾಹನಗಳ ಓಡಾಟದಿಂದ ಪೈಪ್ ಡೆದಿದ್ದು ಕಳೆದ 15 ದಿನಗಳಿಂದ ಅಪಾರ ಪ್ರಮಾಣದ ನೀರು ಚರಂಡಿ ಪಾಲಾಗುತ್ತಿದ್ದ ಬಗ್ಗೆ ಸ್ಥಳೀಯರು ಸಂಬಂಧಪಟ್ಟವರಿಗೆ ದೂರು ನೀಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ

ನಿರಂತರವಾಗಿ ನೀರು ಹರಿಯುತ್ತಿರುವುದರಿಂದ ರಸ್ತೆಗಳಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿ ಹದಗೆಟ್ಟ ರಸ್ತೆಯಲ್ಲಿ ನೀರು ನಿಲ್ಲುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಓಡಾಟಕ್ಕೆ ಅಡಚಣೆ ಉಂಟಾಗಿದೆ 24/7 ನೀರು ಮತ್ತು ನಿರ್ವಹಣೆಕುಡಿಯುವ ನೀರಿನ ಹೊಣೆ ಹೊತ್ತಿರುವ ಲಕ್ಷ್ಮಿ ಸಿವಿಲ್ ಇಂಜಿನಿಯರಿಂಗ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ನ ಕಾರ್ಯವೈಕರಿಯ ಬಗ್ಗೆ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ

ಸ್ವಚ್ಚ ಕುಂದಾಪುರ ಸುಂದರ ಕುಂದಾಪುರ ಜಲ ಸಂರಕ್ಷಣೆಯ ಬಗ್ಗೆ ಇನ್ನಾದರೂ ಪುರಸಭೆಯ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಬೇಕೆಂದು ಸ್ಥಳೀಯ ನಿವಾಸಿ ಭಾಸ್ಕರ್‌ ಗಾಣಿಗ ರವರು ಒತ್ತಾಯಿಸಿದ್ದಾರೆ

ಕೆ ಗಣೇಶ್‌ ಹೆಗ್ಡೆ,ಕುಂದಾಪುರ.

   

Related Articles

error: Content is protected !!