ಕುಂದಾಪುರ :ಕೋಟೇಶ್ವರದಲ್ಲಿ ನಾಳೆಯಿಂದ ನಡೆಯುವ ಕೊಡಿ ಹಬ್ಬದ ಜಾತ್ರೆಯಲ್ಲಿ ಲಕ್ಷಕ್ಕೂ ಮಿಕ್ಕಿ ಭಕ್ತರು ಪಾಲ್ಗೋಳ್ಳುವ ನಿರೀಕ್ಷೆ ಇದ್ದು ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ದೃಷ್ಠಿಯಿಂದ ಕುಂದಾಪುರ ತಾಲೋಕಿನ ಕೋಟೇಶ್ವರ ಗ್ರಾಮ ಹಾಗೂ ಅದಕ್ಕೆ ಹೊಂದಿಕೊಂಡಿರುವ ಗೋಪಾಡಿ ಮತ್ತು ಹಂಗಳೂರು ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ನಾಳೆಯಿಂದ 2 ದಿನಗಳ ಕಾಲ ಮದ್ಯ ನಿಷೇಧ ಮಾಡಿ ಜಿಲ್ಲಧಿಕಾರಿಯವರು ಆದೇಶ ಹೊರಡಿಸಿದ್ದಾರೆ
ನವೆಂಬರ್ 27 ಸೋಮವಾರ ಬೆಳಿಗ್ಗೆ 6.00 ಗಂಟೆಯಿಂದ ನವೆಂಬರ್ 28 ಮಂಗಳವಾರ ಮದ್ಯರಾತ್ರಿ 12.00 ಗಂಟೆಯವರೆಗೆ ಕೋಟೇಶ್ವರ ಹಂಗಳೂರು ಗೋಪಾಡಿಗಳಲ್ಲಿ ಒಣದಿನ (DRY DAY) ಎಂದು ಘೋಷಿಸಿ ಮದ್ಯ ಮಾರಾಟ ನಿಷೇಧಿಸಲಾಗಿದೆ