Home » ಅರ್ಧಂಬರ್ಧ ಪ್ರೇಮಕಥೆ
 

ಅರ್ಧಂಬರ್ಧ ಪ್ರೇಮಕಥೆ

by Kundapur Xpress
Spread the love

ಕುಂದಾಪುರ:ಶಿಕ್ಷಣ ಎನ್ನುವುದು ನಮ್ಮ ಕೈಯಲ್ಲಿರುವ ಶಕ್ತಿಯುತವಾದ ಅಸ್ತ್ರ. ವಿದ್ಯಾರ್ಥಿಗಳು ತಮ್ಮ ಗುರಿಯೆಡೆಗೆ  ಉತ್ಸಾಹಕರಾಗಿದ್ರೆ ಅವಕಾಶಗಳು ಸಿಕ್ಕೇ ಸಿಗುತ್ತದೆ. ಅರ್ಧಂಬರ್ಧ ಕೆಲಸ, ಅರ್ಧಂಬರ್ಧ ಕಲಿಕೆ ಯಾವತ್ತು ಮಾಡಬಾರದು, ಮಾಡಿದ ಒಂದೇ ಕೆಲಸವಾದ್ರೂ ಕೂಡ ಅದು ಅಚ್ಚುಕಟ್ಟಾಗಿರಬೇಕು, ಏನೇ ಕೆಲಸ ಮಾಡಿದರು ಪ್ರೀತಿ ಇಂದ ಮಾಡಿ ಮತ್ತು ಎಷ್ಟೇ ಕಷ್ಟ ಬಂದರು ಸಾಧಿಸುವ ಛಲ ನಿಮ್ಮಲ್ಲಿರಬೇಕು ಎಂದು ಬಿಗ್ ಬಾಸ್ ಖ್ಯಾತಿಯ ಅರವಿಂದ್ ಕೆ. ಪಿಯವರು ಇಲ್ಲಿನ ಪ್ರತಿಷ್ಠಿತ ಭಂಡಾರಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು, ಕುಂದಾಪುರಕ್ಕೆ  ತಮ್ಮ “ಅರ್ಧಂಬರ್ಧ ಪ್ರೇಮಕಥೆ” ಚಲನಚಿತ್ರದ ಪ್ರಚಾರಕ್ಕೆ ಆಗಮಿಸಿ ವಿದ್ಯಾರ್ಥಿಗಳನ್ನ್  ಉದ್ದೇಶಿಸಿ ಮಾತನಾಡಿದರು.

ಭಂಡಾರಕಾರ್ಸ್ ಪದವಿಪೂರ್ವ ಕಾಲೇಜಿನಲ್ಲಿ ಓದಿದ ತಮ್ಮ ಸವಿನೆನಪು, ಕುಂದಾಪ್ರ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಇರುವ ತಮ್ಮ ಒಲವನ್ನು ಮತ್ತು ವಿದ್ಯಾರ್ಥಿಗಳ ಕುರಿತು ಓದುವುದರ ಜೊತೆ ಜೊತೆಗೆ ನಮ್ಮನ್ನ ನಾವು ಬೇರೆ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಸೋತಾಗ ಕುಗ್ಗಬಾರದು ಗೆದ್ದಾಗ  ಹಿಗ್ಗಾಬಾರದು ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆಯೆ ಮುಖ್ಯ.  ಮತ್ತೆ ಕೃತಜ್ಞತೆ ತುಂಬಾ ಮುಖ್ಯ,  ನಿಮಗೆ ಕಲಿಸಿದ ಶಿಕ್ಷಕರ ಇಂದಿಗೂ ಮರೆಯಬಾರದು.ನಾನು ಇಲ್ಲಿಯ ತನಕ ಬರಲು ನನ್ನ ಶಾಲೆ ಮತ್ತು ಕಾಲೇಜೇ ಕಾರಣ ಎಂದು ಭಂಡಾರಕಾರ್ಸ್ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿನಿ ಹಾಗೂ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಹೇಳಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿರುವ ಭಂಡಾರಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿಶ್ವಸ್ತ ಮಂಡಳಿಯ ಹಿರಿಯ ಸದಸ್ಯರಾದ ಯು.ಎಸ್. ಶೆಣೈ, ಡಾ. ಶುಭಕರಾಚಾರಿ ಪದವಿ ಪ್ರಾಂಶುಪಾಲರು,ಭಂಡಾರಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಮತ್ತು ಡಾ.ಜಿ. ಎಮ್. ಗೊಂಡ ಪದವಿಪೂರ್ವ ಪ್ರಾಂಶುಪಾಲರು ಭಂಡಾರಕಾರ್ಸ್ ಕಾಲೇಜು, ಕುಂದಾಪುರ ಇವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ “ಅರ್ಧಂಬರ್ಧ ಪ್ರೇಮಕಥೆ” ಚಲನಚಿತ್ರಕ್ಕೆ ಮತ್ತು ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಚಿತ್ರದ ನಾಯಕಿ ದಿವ್ಯ ಉರುಡಗ ಮತ್ತು ನಾಯಕನಟ ಕೆ.ಪಿ.ಅರವಿಂದ್ ಅವರನ್ನು ಕಾಲೇಜಿನ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಜ್ಯೋತಿ ಸಾಲಿಗ್ರಾಮ ನಿರೂಪಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು.

   

Related Articles

error: Content is protected !!