ಕೋಟೇಶ್ವರ : ಕರಾವಳಿಯನ್ನು ಪರಶುರಾಮ ಸೃಷ್ಟಿ ಎಂದೇ ಹೇಳಲಾಗುತ್ತದೆ ಇಂತಹ ಪರಶುರಾಮ ಸೃಷ್ಟಿ ಕರಾವಳಿಯಲ್ಲಿ ದೇವಾಲಯಗಳಿಗೇನು ಕಮ್ಮಿ ಇಲ್ಲ ಅಂತಹ ಪುರಾತನ ದೇವಾಲಯಗಳಲ್ಲಿ ಕುಂದಾಪುರದ ಕುಂದೇಶ್ವರ ಮತ್ತು ಕೋಟೇಶ್ವರದಲ್ಲಿರುವ ಕೋಟಿಲಿಂಗೇಶ್ವರ ದೇವಾಲಯಗಳಿಗೆ ವಿಶಿಷ್ಟವಾದಂತಹ ಸ್ಥಾನವಿದೆ ಪುರಾತನ ಕಾಲದಲ್ಲಿ ಇದನ್ನು ಧ್ವಜಪುರ ಎಂದು ಈಗಿನ ಕಾಲದಲ್ಲಿ ಇದನ್ನು ಕೋಟೇಶ್ವರ ಎಂದು ಕರೆಯಲಾಗುತ್ತದೆ
ಕೋಟೇಶ್ವರದ ಕೋಟಿಲಿಂಗೇಶ್ವರ ದೇವಾಲಯಕ್ಕೆ ಅತ್ಯಂತ ಶ್ರೇಷ್ಠವಾದ ಸ್ಥಳ ಪುರಾಣವಿದೆ ಇಲ್ಲಿಯ ಸ್ಥಳ ಪುರಾಣದ ಪ್ರಕಾರ ಕೋಟೇಶ್ವರ ಕ್ಷೇತ್ರ ಬರಗಾಲದಿಂದ ತತ್ತರಿಸಿ ಹೋದಾಗ ಒಂದು ಕೋಟಿ ಋಷಿಗಳು ತಪಸ್ಸು ಮಾಡಿ ಶಿವನನ್ನು ಒಲಿಸಿಕೊಳ್ಳುತ್ತಾರೆ ಆಗ ಋಷಿಗಳ ತಪಸ್ಸಿಗೆ ಮೆಚ್ಚಿದ ಶಿವನು ಕೋಟಿ ಲಿಂಗಗಳಲ್ಲಿ ಐಕ್ಯನಾಗಿದ್ದರಿಂದ ಈ ಕ್ಷೇತ್ರವನ್ನು ಕೋಟಿಲಿಂಗೇಶ್ವರ ಎಂದು ಕರೆಯುತ್ತಾರೆ
ರಾಜನಿಗೆ ಕೋಟಿಲಿಂಗೇಶ್ವರನ ಉತ್ಸವ ಮಾಡಬೇಕೆಂಬ ಮನಸ್ಸು ಉಂಟಾಗಿ ಬೃಹತ್ತಾದಂತಹ ರಥ ನಿರ್ಮಾಣಕ್ಕೆ ಹೇಳಿದ್ದನಂತೆ ಆತನ ಸಮಯಕ್ಕೆ ಸರಿಯಾಗಿ ಬ್ರಹ್ಮರಥ ತಯಾರಾಗದೆ ಇದ್ದಾಗ ಬಿದಿರು ಮತ್ತು ಕಬ್ಬಿನ ಜಲ್ಲೆಗಳಿಂದ ರಥ ತಯಾರಿಸಿ ಕೋಟಿಲಿಂಗೇಶ್ವರ ಹಬ್ಬವನ್ನು ಮಾಡಿದ್ದನಂತೆ ಪ್ರಥಮವಾಗಿ ಕೊಡಿ ಕಬ್ಬಿನ ಜಲ್ಲೆಗಳಿಂದ ನಿರ್ಮಿತವಾದ ರಥವಾಗಿದ್ದರಿಂದ ಈ ರಥೋತ್ಸವಕ್ಕೆ ಕೊಡಿ ಹಬ್ಬ ಎಂದು ಹೆಸರು ಬಂದಿತ್ತೆಂದು ಹೇಳಲಾಗುತ್ತದೆ ಕೋಟಿಲಿಂಗೇಶ್ವರ ದೇವಾಲಯದ ವಾಸ್ತುಶಿಲ್ಪವು ಕೇರಳ ಮಾದರಿಯ ಶೈಲಿಯಲ್ಲಿ ನಿರ್ಮಿಸಲಾಗಿದೆ ಈ ದೇವಾಲಯವು 7 ಪ್ರಕಾರಗಳನ್ನು ಹೊಂದಿದೆ
ಈ ಕೆರೆಯಲ್ಲಿ ಸ್ನಾನ ಮಾಡಿದರೆ ಸರ್ವ ರೋಗಗಳು ನಾಶವಾಗಿ ಆರೋಗ್ಯವಂತರಾಗುತ್ತಾರೆ ಎಂದು ಹೇಳಲಾಗುತ್ತದೆ ಪ್ರತಿ ವರ್ಷವೂ ಕಾರ್ತಿಕ ಶುದ್ಧ ಹುಣ್ಣಿಮೆಯಂದು ಅದ್ಭುತವೆನಿಸುವಂತೆ ನಡೆಸಲ್ಪಡುವ ಬ್ರಹ್ಮರಥೋತ್ಸ ನೋಡಲು ಎರಡು ಕಣ್ಣು ಸಾಲದು ನವ ವಿವಾಹಿತ ದಂಪತಿಗಳು ಕೊಡಿ ಹಬ್ಬಕ್ಕೆ ಬಂದು ಕಬ್ಬಿನ ಕೊಡಿಯನ್ನುತಂದು ಅರ್ಪಿಸುವುದು ಇಲ್ಲಿಯ ವೈಶಿಷ್ಟ್ಯ ಕೊಡಿ ಹಬ್ಬ ಕುಂದಾಪುರದ ಭಕ್ತರ ಪಾಲಿನ ಅತ್ಯಂತ ಶ್ರೇಷ್ಠ ಉತ್ಸವ ಎಂದರೆ ತಪ್ಪಾಗಲಾರದು ಉತ್ಸವದ ದಿನ ಅತ್ಯಂತ ಭಕ್ತಿಯಿಂದ ಸಾವಿರಾರು ಭಕ್ತರು ಸೇರುವುದು ಇಲ್ಲಿನ ವೈಶಿಷ್ಟವಾಗಿದೆ
ಪ್ರದೀಪ್ ಚಿನ್ಮಯಿ ಆಸ್ಪತ್ರೆ ಕುಂದಾಪುರ