Home »  ಶ್ರೀರಾಮ ವಿದ್ಯಾಕೇಂದ್ರದಲ್ಲಿ ತರಬೇತಿ ಕಾರ್ಯಾಗಾರ
 

 ಶ್ರೀರಾಮ ವಿದ್ಯಾಕೇಂದ್ರದಲ್ಲಿ ತರಬೇತಿ ಕಾರ್ಯಾಗಾರ

by Kundapur Xpress
Spread the love

 ಕುಂದಾಪುರ : ಕೋಡಿಯ ಶ್ರೀರಾಮ ನಗರದಲ್ಲಿರುವ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಉಡುಪಿ ಜಿಲ್ಲಾ ವಿದ್ಯಾಭಾರತಿಯ ವತಿಯಿಂದ  ಸಮಾಜ ವಿಜ್ಞಾನ ತರಬೇತಿ ಕಾರ್ಯಗಾರ ನಡೆಯಿತು ಕರ್ನಾಟಕದ ಉಡುಪಿ ಜಿಲ್ಲೆಯ ವಿದ್ಯಾಭಾರತಿಯ ಉಪಾಧ್ಯಕ್ಷರಾದ ಕೋಡಿ ನಾಗೇಶ್ ಕಾಮತ್ ರವರು ತರಬೇತಿ ಕಾರ್ಯಗಾರವನ್ನು ದೀಪ ಬೆಳಗಿಸಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವುದರ ಮೂಲಕ  ಉದ್ಘಾಟಿಸಿ ಮಾತನಾಡಿದರು

ಈ ತರಬೇತಿ ಕಾರ್ಯಾಗಾರವು ಪ್ರತಿಯೊಬ್ಬ ಶಿಕ್ಷಕರಿಗೆ ಅತ್ಯಂತ ಅಗತ್ಯವಾಗಿದ್ದು  ಕಾಲಕ್ಕನುಗುಣವಾಗಿ ಶಿಕ್ಷಕರು ಬದಲಾವಣೆ ಹೊಂದಬೇಕಾಗಿದೆ ಬದಲಾವಣೆ ಬಯಸುವಂತಹ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರವು ಅಗತ್ಯವಾಗಿದ್ದರಿಂದ ನಮ್ಮ ಶಾಲೆಯಲ್ಲಿ ಸಮಾಜ ವಿಜ್ಞಾನ ಕಾರ್ಯಗಾರವನ್ನು ಆಯೋಜಿಸಲಾಗಿದೆ ಇದರ ಪ್ರಯೋಜನವನ್ನು ತಾವೆಲ್ಲರೂ ಪಡೆಯಬೇಕೆಂದು ಹೇಳಿದರು.

ಕರ್ನಾಟಕದ ಉಡುಪಿ ಜಿಲ್ಲೆಯ ವಿದ್ಯಾಭಾರತಿಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಹೈಕಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ಮಕ್ಕಳ ಮಾನಸಿಕತೆಗೆ ಅನುಗುಣವಾಗಿ ಶಿಕ್ಷಕರ ಮಾನಸಿಕತೆಯು ಬದಲಾವಣೆ ಆಗಬೇಕಾಗಿದ್ದು ವಿದ್ಯಾರ್ಥಿಗಳನ್ನು ಸಂತೋಷಗೊಳಿಸುವುದು ಶಿಕ್ಷಕನ ಕರ್ತವ್ಯವಾಗಿದೆ ಶಿಕ್ಷಕರು ವಿದ್ಯಾರ್ಥಿಗಳ ಚಿಂತನೆಗಳಿಗೆ ಅನುಗುಣವಾಗಿ ನಮ್ಮ ಚಿಂತನೆಗಳನ್ನು ಬದಲಾವಣೆ ಮಾಡಿಕೊಳ್ಳಬೇಕೆಂದು ಅವರು ಕರೆ ನೀಡಿದರುಸಾರ್ವಜನಿಕ ಶಿಕ್ಷಣ ಇಲಾಖೆಯ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿ ಹಾಗೂ ಶಿಕ್ಷಣ ಸಂಯೋಜಕರಾದ ಸಂತೋಷ ಪೂಜಾರಿ  ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗೆ ಚಟುವಟಿಕೆಗಳ ಮೂಲಕ ಶಿಕ್ಷಣವನ್ನು ನೀಡುವ ಅಗತ್ಯವಿದೆ ಚಟುವಟಿಕೆಗಳು ವಿದ್ಯಾರ್ಥಿಗಳ ಆಸಕ್ತಿಯನ್ನು ಕೆರಳಿಸುತ್ತದೆ ಬಹುಬೇಗ ವಿದ್ಯಾರ್ಥಿಗಳು ಜ್ಞಾನವನ್ನು ಹೊಂದುತ್ತಾರೆ ಎಂದು ನುಡಿದರು

ಉದ್ಘಾಟನ ಸಮಾರಂಭದಲ್ಲಿ ಬೀಜಾಡಿ ಸರಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕರು ಹಾಗೂ ರಾಜ್ಯ ಮಟ್ಟದ ಸಮಾಜ ವಿಜ್ಞಾನದ ಸಂಪನ್ಮೂಲ ಶಿಕ್ಷಕರಾದ ಡಾ.ಸದಾನಂದ ಬೈಂದೂರು ಮತ್ತು ಸಂಸ್ಥೆಯ ಪ್ರಾಂಶುಪಾಲರಾದ  ಜಿತೇಂದ್ರ ಕುಮಾರ್ ಉಪಸ್ಥಿತರಿದ್ದರು .

ಉಡುಪಿ ಜಿಲ್ಲೆಯ ವಿದ್ಯಾಭಾರತಿಯು ತನ್ನ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ಶಿಕ್ಷಕರಿಗೆ ಆಯೋಜಿಸಿದ ಸಮಾಜ ವಿಜ್ಞಾನ ಕಾರ್ಯಗಾರದಲ್ಲಿ ಅಮೃತ ಭಾರತಿ ಪ್ರೌಢಶಾಲೆ ಮತ್ತು ಪ್ರಾಥಮಿಕ ವಿಭಾಗ ಹೆಬ್ರಿ , ಅಮೃತ ಭಾರತಿ ವಿದ್ಯಾ ಕೇಂದ್ರ ಹೆಬ್ರಿ,  ಶ್ರೀರಾಮ ವಿದ್ಯಾಕೇಂದ್ರ ಕೋಡಿ , ಶಾಂತಿಧಾಮ ಪೂರ್ವಗುರುಕುಲ ಕೋಟೇಶ್ವರ, ಡ್ಯುಯಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆ ಅಮಾಸೆಬೈಲು,ಸೇವಾಸಂಗಮ ವಿದ್ಯಾಕೇಂದ್ರ ತೆಕ್ಕಟ್ಟೆ  ಸರಸ್ವತಿ ವಿದ್ಯಾಲಯ ಸಿದ್ದಾಪುರ ಯು,ಎಸ್ ನಾಯಕ್ ಪ್ರೌಢಶಾಲೆ ಪಟ್ಲ  ಗಣಪತಿ ಹಿರಿಯ ಪ್ರಾಥಮಿಕ ಶಾಲೆ ಪಟ್ಲ  ಆರ್. ಕೆ .ಪಾಟ್ಕರ್ ಶಾರದಾ ಹಿರಿಯ ಪ್ರಾಥಮಿಕ ಶಾಲೆ ಚೇರ್ಕಾಡಿ  ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಕುತ್ಯಾರು ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು .ಶ್ರೀಮತಿ ನಾಗವೇಣಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಶ್ರೀಮತಿ ನಾಗರತ್ನ ಸ್ವಾಗತಿಸಿ ಶ್ರೀಮತಿ ಸುವರ್ಣರವರು ಅತಿಥಿಗಳನ್ನು ಪರಿಚಯಿಸಿ ಶ್ರೀಮತಿ ರಶ್ಮಿ ಧನ್ಯವಾದವಿತ್ತರು

   

Related Articles

error: Content is protected !!