Home » ಪುತ್ತಿಗೆ ಪರ್ಯಾಯದ ಪೂರ್ವ ಸಿದ್ಧತೆ ಬಗ್ಗೆ ಸಭೆ
 

ಪುತ್ತಿಗೆ ಪರ್ಯಾಯದ ಪೂರ್ವ ಸಿದ್ಧತೆ ಬಗ್ಗೆ ಸಭೆ

by Kundapur Xpress
Spread the love

ಉಡುಪಿ : ಪುತ್ತಿಗೆ ಮಠದ ಶ್ರೀಶ್ರಿ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಪೂರ್ವ ಸಿದ್ಧತೆಗಾಗಿ  ಜಿಲ್ಲಾಧಿಕಾರಿಯವರು ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಸರಕಾರದ ವಿವಿಧ ಇಲಾಖೆಗಳ ಮುಖ್ಯಾಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದರು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್‌ ಶೆಟ್ಟಿ ಹಾಗೂ ಶ್ರೀ  ಯಶ್ಪಾಲ್ ಸುವರ್ಣ  ಭಾಗವಹಿಸಿ ನಗರ ಸ್ವಚ್ಛತೆ ಸಹಿತ ಮೂಲ ಸೌಕರ್ಯಗಳ ಬಗ್ಗೆ ಚರ್ಚಿಸಿದರು ಸಭೆಯಲ್ಲಿ ಜಿಲ್ಲಾಧಿಕಾರಿ ಶ್ರಿಮತಿ ವಿದ್ಯಾಕುಮಾರಿ ಕೆ.  ಇವರು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಪರ್ಯಾಯೊತ್ಸವಕ್ಕೆ ಸಕಲ ಸಹಕಾರ ನೀಡಬೇಕು ಎಂದು ಆದೇಶಿಸಿದರು. ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಪ್ರಸನ್ನ ಏಚ್. ಹಾಗೂ ಸರ್ಕಾರದ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.

ಸ್ವಾಗತ ಸಮಿತಿ ಪರವಾಗಿ ಶ್ರೀ ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯ, ಮಹಾಪೋಷಕರಾದ ಶ್ರೀ ಸುರೇಶ್ ಶೆಟ್ಟಿ ಗುರ್ಮೆ, ಪ್ರಧಾನ ಕಾರ್ಯದರ್ಶಿ ಶ್ರೀ ದೇವಿಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರಾದ ಶ್ರೀ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಕೋಶಾಧಿಕಾರಿ ಶ್ರೀ ರಂಜನ್ ಕಲ್ಕೂರ, ಹಾಗೂ ಸಂಚಾಲಕರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ, ಶ್ರೀ ಸಂತೋಷ್ ಶೆಟ್ಟಿ ತೆಂಕರಗತ್ತು,  ಶ್ರೀ ಬಾಲಾಜಿ ಯೋಗೀಶ್ ಶೆಟ್ಟಿ, ಶ್ರೀ ರಮೇಶ್ ಭಟ್ ಕೆ , ವಿಷ್ಣುಮೂರ್ತಿ ಉಪಾದ್ಯಾಯ, ಶ್ರೀ ರವೀಂದ್ರ ಆಚಾರ್ಯ,  ಶ್ರೀ ಹರಿಕೃಷ್ಣ ಶಿವತ್ತಾಯ, ಹಾಗೂ ವಕೀಲರಾದ ಶ್ರೀ ಶಶಾಂಕ್ ಶಿವಾತ್ತಾಯ ಉಪಸ್ಥಿತರಿದ್ದರು

   

Related Articles

error: Content is protected !!