ಕುಂದಾಪುರ : ಡ್ಯುಯಲ್ ಸ್ಟಾರ್ ಎಜುಕೇಶನ್ ಶಾಲೆ ಅಮಾಸೆಬೈಲು ಇಲ್ಲಿ ವಿಜ್ಞಾನ ತರಬೇತಿ ಕಾರ್ಯಗಾರ ನಡೆಯಿತು . ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶೈಕ್ಷಣಿಕ ಸಂಯೋಜಿತ 10 ಸಂಸ್ಥೆಗಳಿಂದ 15 ವಿಜ್ಞಾನ ಶಿಕ್ಷಕರು ಭಾಗವಹಿಸಿದ್ದರು.
ಡ್ಯುಯಲ್ ಸ್ಟಾರ್ ಎಜುಕೇಶನ್ ಶಾಲೆ ಅಮಾಸೆಬೈಲು ಸಂಸ್ಥೆಯ ಸಂಚಾಲಕರು ಶ್ರೀ ಶಶಿಧರ ದೇವಾಡಿಗ ತರಬೇತಿ ಕಾರ್ಯಗಾರವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು . ನಮ್ಮ ಶಾಲೆಯಲ್ಲಿ ವಿಜ್ಞಾನ ಕಾರ್ಯಗಾರವನ್ನು ಆಯೋಜಿಸಲಾಗಿದೆ. ಇದರ ಸಂಪನ್ಮೂಲವನ್ನು ತಾವೆಲ್ಲರೂ ಪಡೆಯುವಂತಾಗಲಿಎಂದು ತಮ್ಮ ಉದ್ಘಾಟನ ಭಾಷಣದಲ್ಲಿ ನುಡಿದರು
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಕಾರ್ಯದರ್ಶಿ ಮಹೇಶ ಹೈಕಾಡಿ ಪ್ರಾಸ್ತಾವಿಕ ಮಾತನಾಡುತ್ತಾ ಶಿಕ್ಷಕರು ವಿದ್ಯಾರ್ಥಿಗಳನ್ನು ತಲುಪಲು , ಬೋಧನೆ ಶಿಶುಕೇಂದ್ರೀತವಾಗಲು ಆಶಾದಾಯಕವಾಗಲು ತರಬೇತಿ ಅನಿವಾರ್ಯ ವಾಗಿದೆ ಎಂದು ಹೇಳಿದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷರು ಶ್ರೀ ಪಾಂಡುರಂಗ ಪೈ ಸಿದ್ಧಾಪುರ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಶಿಕ್ಷಕರು ಜ್ಞಾನ ಸಂಪನ್ನರು , ನಿರಂತರವಾಗಿ ಹೊಸದಾದ ವಿಷಯಗಳನ್ನು ತಿಳಿಯುತ್ತ ಅರಿವು , ತಿಳುವಳಿಕೆ , ಪ್ರಸ್ತುತ ಜ್ಞಾನವನ್ನು ಸಂಪಾದಿಸಿ ಕೊಳ್ಳುತ್ತಿರಬೇಕು ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತುಗಳನ್ನಾಡಿದರು.
ತರಬೇತಿ ಕಾರ್ಯಗಾರದ ವೇದಿಕೆಯಲ್ಲಿ ವಿಜ್ಞಾನದ ಸಂಪನ್ಮೂಲ ಶಿಕ್ಷಕರಾಗಿರುವ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಂಪನ್ಮೂಲ ವಿಜ್ಞಾನ ಶಿಕ್ಷಕರು ಸರಕಾರಿ ಪ್ರೌಢಶಾಲೆ ಶಿವಪುರ ಶ್ರೀ.ಶಿವಪ್ರಸಾದ ಅಡಿಗ , ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಪ್ರಶಿಕ್ಷಣ ಪ್ರಮುಖ್ ಶ್ರೀಮತಿ ನವ್ಯ,ಜಿಲ್ಲಾ ವಿಜ್ಞಾನ ಪ್ರಮುಖ್ ಶ್ರೀಮತಿ ಸಂಧ್ಯಾ ಭಟ್ ಉಪಸ್ಥಿತರಿದ್ದರು . ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ತನ್ನ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ಶಿಕ್ಷಕರಿಗೆ ಆಯೋಜಿಸಿದ ವಿಜ್ಞಾನ ಕಾರ್ಯಗಾರ ಇದಾಗಿದೆ
ನಿರೂಪಣೆ ಕುಮಾರಿ ಸೌಮ್ಯ , ಸ್ವಾಗತ ಶ್ರೀಮತಿ ರಾಧಿಕ ರಾವ್ ಮಾಡಿದರು.
ತರಬೇತಿಯ ಸಮಾರೋಪದ ವೇದಿಕೆಯಲ್ಲಿ ಡ್ಯುಯಲ್ ಸ್ಟಾರ್ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಮತ್ತು ಪ್ರಾಂಶುಪಾಲರು ಶ್ರೀ ಪ್ರಕಾಶ ಆಚಾರ್ಯ ವಡ್ಡರ್ಸೆ ಯವರು ಗಳಿಸಿಕೊಂಡ ತರಬೇತಿ ಸಂಪತ್ತನ್ನು ವಿದ್ಯಾರ್ಥಿಗಳ ಹೃದಯಕ್ಕೆ ಮುಟ್ಟುವಂತೆ ಮಾಡಿದಾಗ ತರಬೇತಿಯ ಸಂಪತ್ತು ಸಂಪನ್ನಗೊಳ್ಳುವುದು ಎಂದು ಹೇಳಿದರು.
ತರಬೇತಿ ನಿರ್ವಹಿಸಿದ ಸಂಪನ್ಮೂಲ ವಿಜ್ಞಾನ ಶಿಕ್ಷಕರು ಶ್ರೀ ಶಿವಪ್ರಸಾದ ಅಡಿಗ ಶಿವಪುರ ಇವರಿಗೆ ಗೌರವ ಸ್ಮರಣಿಕೆ ನೀಡಿ ಗೌರವಿಸಿ ಮಾತನಾಡಿದರು. ಶಾಂತಿಮಂತ್ರದೊಂದಿಗೆ ತರಬೇತಿ ಸಂಪನ್ನಗೊಂಡಿತು