ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಗುಲ್ವಾಡಿ, ಕಾವ್ರಾಡಿ, ಬಳ್ಕೂರು ಗ್ರಾಮದ ಸರ್ವೆ ನಂ 180, 157, 189 ರಲ್ಲಿನ 11.90 ಎಕರೆ ವಿಸ್ತೀರ್ಣ ಪ್ರದೇಶದ ಮರಳು ಬ್ಲಾಕ್ ಸಂಖ್ಯೆ 4 ರಲ್ಲಿ ಹಾಗೂ ಜಪ್ತಿ, ಹಳ್ನಾಡು ಗ್ರಾಮದ ಸರ್ವೆ ನಂ. 174, 56 ರಲ್ಲಿನ 5.70 ಎಕರೆ ವಿಸ್ತೀರ್ಣ ಪ್ರದೇಶದ ಮರಳು ಬ್ಲಾಕ್ ಸಂಖ್ಯೆ 6 ರಲ್ಲಿ ಮರಳನ್ನು ಸಾರ್ವಜನಿಕರಿಗೆ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಉಡುಪಿ ಇ-ಸ್ಯಾಂಡ್ ಮೂಲಕ ಪೂರೈಸಲು ತೀರ್ಮಾನಿಸಲಾಗಿದೆ.
ಅದರಂತೆ ಉಡುಪಿ ಇ-ಸ್ಯಾಂಡ್ ಆಪ್ ಮುಖಾಂತರ www.udupiesand.com ಜಿಲ್ಲಾ ವ್ಯಾಪ್ತಿಯಲ್ಲಿನ ಸಾರ್ವಜನಿಕರಿಗೆ/ ಅಭಿವೃದ್ಧಿ ಕಾಮಗಾರಿಗಳಿಗೆ ಮರಳನ್ನು ವಿತರಿಸುವ ಕಾರ್ಯ ಪ್ರಾರಂಭಗೊಂಡಿದ್ದು, ಮರಳು ಅವಶ್ಯಕತೆ ಇರುವವರು ಅಂತರ್ಜಾಲದಲ್ಲಿ ಸಂದರ್ಶಿಸಿ ತಮ್ಮ ಹೆಸರು/ ವಾಸ ದಾಖಲಿಸಿ ಬೇಕಾಗಿರುವ ಮರಳಿನ ಪ್ರಮಾಣವನ್ನು ನಮೂದಿಸಿ ಆನ್ಲೈನ್ ಮುಖಾಂತರ ಹಣ ಪಾವತಿ ಮಾಡಬಹುದಾಗಿದೆ. ಇದೊಂದು ಸರಳ ಹಾಗೂ ಪಾರದರ್ಶಕ ಪ್ರಕ್ರಿಯೆಯಾಗಿದ್ದು, ಜಿಲ್ಲೆಯ ಸಾರ್ವಜನಿಕರು ಇದರ ಉಪಯೋಗ ಪಡೆಯಬಹುದಾಗಿದೆ. ಆದರೆ ಯಾವುದೇ ಕಾರಣಕ್ಕೂ ಹೊರ ಜಿಲ್ಲೆಗೆ ಮರಳು ಪೂರೈಸಲು ಅವಕಾಶವಿರುವುದಿಲ್ಲ.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಹಳ್ಳ/ ತೊರೆ ಮತ್ತು ಕೆರೆಗಳಲ್ಲಿನ ಮರಳು ನಿಕ್ಷೇಪ ಪ್ರದೇಶಗಳಿಂದ ತೆರವುಗೊಳಿಸಿರುವ ಪ್ರತಿ ಮೆ.ಟನ್ಗೆ ಮರಳಿನ ದರ ರೂ. 300/- (ಸಾಗಾಟ ಪರವಾನಿಗೆಯೊಂದಿಗೆ). ಲೋಡಿಂಗ್ ವೆಚ್ಚ ಮತ್ತು ಮರಳು ತೆರವುಗೊಳಿಸುವ ವೆಚ್ಚವನ್ನು ಮರಳು ಬೇಡಿಕೆದಾರರು ಭರಿಸಬೇಕಾಗಿರುತ್ತದೆ. ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿದ ಪ್ರದೇಶದಲ್ಲಿನ ಮರಳು ಬ್ಲಾಕ್ಗಳಿಂದ ತೆರವುಗೊಳಿಸಿದ ಮರಳಿನ ದರ ಪ್ರತಿ ಮೆ.ಟನ್ಗೆ (ಸಾಗಾಟ ಪರವಾನಿಗೆಯೊಂದಿಗೆ) ರೂ. 700/- ಮರಳಿನ ದರ:3 ಟನ್ ರೂ. 2,100, 6 ಟನ್ ರೂ. 4,200, 8 ಟನ್ ರೂ. 5,600 ಮತ್ತು 10 ಟನ್ ರೂ. 7000/-ಲೋಡಿಂಗ್ ವೆಚ್ಚ : 8 ರಿಂದ 10 ಮೆ.ಟನ್ ವಾಹನಕ್ಕೆ ರೂ. 700, 4 ರಿಂದ 8 ಮೆ.ಟನ್ ವಾಹನಕ್ಕೆ ರೂ. 500 ಹಾಗೂ 1 ರಿಂದ 4 ಮೆ.ಟನ್ ವರೆಗೆ ರೂ. 300 ರೂ.
ಜಿಲ್ಲಾ ವ್ಯಾಪ್ತಿಯಲ್ಲಿ ಮರಳು ಸಾಗಾಟ ದರ ದೊಡ್ಡ ಲಾರಿಗೆ (8 ರಿಂದ 10 ಮೆ.ಟನ್) 20 ಕಿ.ಮೀಟರ್ ವರೆಗೆ ಸಾಗಾಣಿಕೆ ದರ ರೂ. 3000, ನಂತರದ ಪ್ರತಿ ಕಿ.ಮೀಟರ್ಗೆ ರೂ. 50/- (20 ಕಿ.ಮೀಟರ್ ಹೊರತುಪಡಿಸಿದ ನಂತರದ ಪ್ರತಿ ಕಿ.ಮೀಟರ್ಗೆ ಹೋಗುವ ಮತ್ತು ಬರುವ ಕಿ.ಮೀಟರ್ ಒಳಗೊಂಡಂತೆ), ಮಧ್ಯಮ ಗಾತ್ರದ ವಾಹನಗಳಿಗೆ (4 ರಿಂದ 8 ಮೆ.ಟನ್) 20 ಕಿ.ಮೀಟರ್ವರೆಗೆ ಸಾಗಾಣಿಕೆ ದರ ರೂ. 2000 ನಂತರದ ಪ್ರತಿ ಕಿ.ಮೀಟರ್ಗೆ ರೂ. 40/- (20 ಕಿ.ಮೀಟರ್ ಹೊರತುಪಡಿಸಿದ ನಂತರದ ಪ್ರತಿ ಕಿ.ಮೀಟರ್ಗೆ ಹೋಗುವ ಮತ್ತು ಬರುವ ಕಿ.ಮೀಟರ್ ಒಳಗೊಂಡಂತೆ) ಹಾಗೂ ಸಣ್ಣ ವಾಹನಗಳಿಗೆ (1 ರಿಂದ 4 ಮೆ.ಟನ್ ವರೆಗೆ) 20 ಕಿ.ಮೀಟರ್ವರೆಗೆ ಸಾಗಾಣಿಕೆ ದರ ರೂ. 1500/- ನಂತರದ ಪ್ರತಿ ಕಿ.ಮೀಟರ್ಗೆ ರೂ. 35/- (20 ಕಿ.ಮೀಟರ್ ಹೊರತುಪಡಿಸಿದ ನಂತರದ ಪ್ರತಿ ಕಿ.ಮೀಟರ್ಗೆ ಹೋಗುವ ಮತ್ತು ಬರುವ ಕಿ.ಮೀಟರ್ ಒಳಗೊಂಡಂತೆ) ನಿಗಧಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಿರಿಯ ಭೂವಿಜ್ಞಾನಿಯವರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉಡುಪಿ ದೂರವಾಣಿ ಸಂಖ್ಯೆ: 0820-2572333, ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 0820-2950088, ಸ್ಯಾಂಡ್ ಆಪ್ ದೂರವಾಣಿ ನಂ. 6366745888, 6364024555 ಹಾಗೂ 6366871888 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ